ಪರಿವಿಡಿ

This book is available at Ramakrishna Ashrama, Mysore.

ಮೌಸಲಪರ್ವ

ಮಹಾಯುದ್ಧವು ಮುಗಿದು, ಯುಧಿಷ್ಠಿರನು ರಾಜ್ಯವಾಳಲಾರಂಭಿಸಿ ಮೂವತ್ತಾರು ವರ್ಷಗಳು ಕಳೆದುಹೋಗಿದ್ದವು. ಮಹಾಯುದ್ಧಕ್ಕೆ ಮುಂಚೆ ಕಾಣಿಸಿಕೊಂಡಿದ್ದಂಥ ದುಶ್ಶಕುನಗಳೇ ಈಗ ಪುನಃ ಕಾಣಿಸಿಕೊಳ್ಳತೊಡಗಿದ್ದವು. ಯಾವುದೋ ಭೀಕರ ಅನಾಹುತ ಕಾದಿದೆ ಎಂದು ಎಲ್ಲರೂ ಭಯಪಡುತ್ತಿದ್ದರು. ಯಾವ ವಿನಾಶ ಕಾದಿದೆ ಎಂಬುದು ಯುಧಿಷ್ಠಿರನ ಊಹೆಗೆ ಬಾರದಾಯಿತು. ಸದ್ಯದಲ್ಲಿಯೇ ಘೋರವಾದದ್ದೇನೋ ಸಂಭವಿಸಲಿದೆ ಎಂದಂತೂ ಅನ್ನಿಸಿತು.ಷ್ಣನೂ ಈ ದುಶ್ಶಕುನಗಳನ್ನು ಕಂಡನು.ಷ್ಣಿವಂಶದ ನಾಶ ಸನ್ನಿಹಿತವಾಗಿದೆ ಎಂಬುದು ಅವನಿಗೆ ಗೊತ್ತಾಯಿತು, ಗಾಂಧಾರಿಯು ಕೊಟ್ಟ ಶಾಪವಲ್ಲದೆ ಅದಕ್ಕೂ ಮುಂಚಿನ ಇನ್ನೂ ಒಂದು ಶಾಪವುಷ್ಣಿಗಳ ಮೇಲಿತ್ತು. ಒಂದು ಸಲ ಕಣ್ವ ನಾರದ ವಿಶ್ವಾಮಿತ್ರ ಈ ಮೂವರು ದ್ವಾರಕೆಗೆ ಬಂದಿದ್ದಾಗ, ವಸುದೇವನ ಕುಟುಂಬದ ಕೆಲವು ಪಡೆಹುಡುಗರಿಗೆ ಈ ಮಹರ್ಷಿಗಳನ್ನು ಲೇವಡಿ ಮಾಡಿ ಸಂತೋಷಪಡಬೇಕೆಂದು ಮನಸ್ಸಾಯಿತು. ಅವರು ಸಾಂಬನೆಂಬ ತರುಣನಿಗೆ ಗರ್ಭಿಣಿಯಂತೆ ವೇಷ ಹಾಕಿ, ಅವನನ್ನು ಋಷಿಗಳೆದುರಿಗೆ ಕರೆದುಕೊಂಡು ಹೋಗಿ, “ಈ ಹುಡುಗಿ ತನ್ನ ಗರ್ಭದಲ್ಲಿರುವ ಮಗುವನ್ನು ನಿರೀಕ್ಷಿಸುತ್ತಿದ್ದಾಳೆ. ಋಷಿಗಳಾದ ನಿಮಗೆ ದಿವ್ಯಷ್ಟಿ ಇರುವುದೆಂದು ಕೇಳಿ ಬಲ್ಲೆವು. ಇವಳ ಹೊಟ್ಟೆಯಲ್ಲಿ ಹುಟ್ಟಲಿರುವುದು ಗಂಡೋ ಹೆಣ್ಣೋ ಹೇಳುವಿರಾ?” ಎಂದು ಪ್ರಶ್ನೆಮಾಡಿದರು. ಋಷಿಗಳಿಗೆ ಯಾವ ಸದ್ಗುಣವಿದ್ದರೂ, ಹಾಸ್ಯಪ್ರಜ್ಞೆ ಸ್ವಲ್ಪ ಕಡಿಮೆಯೇ. ಅವರಿಗೆ ಈ ಹುಡುಗರು ತಮ್ಮನ್ನು ಹಾಸ್ಯ ಮಾಡುತ್ತಿರುವರೆಂಬುದು ತಿಳಿದು ಅಸಾಧ್ಯ ಕೋಪ ಬಂದಿತು. ಅವರು, “ ನೀವು ಸ್ತಿ

ಯೆಂದು ಕರೆಯುತ್ತಿರುವ ಇವನ ಹೊಟ್ಟೆಯಲ್ಲಿ ಒನಕೆಯೊಂದು ಹುಟ್ಟುತ್ತದೆ. ಅದೇ ಇಡೀಷ್ಣಿವಂಶದ ನಾಶಕ್ಕೆ ಮೂಲವಾಗುತ್ತದೆ” ಎಂದು ಶಾಪ ಕೊಟ್ಟು ಬಿಟ್ಟರು. ಏನೋ ಮಾಡುವುದಕ್ಕೆ ಹೋಗಿ ಏನೋ ಆಯಿತಲ್ಲ ಎಂದು ಹುಡುಗರಿಗೆ ತುಂಬ ಭಯವಾಯಿತು. ಋಷಿಗಳ ಶಾಪದಂತೆ ಸಾಂಬನ ಹೊಟ್ಟೆಯಿಂದ ಒಂದು ಒನಕೆಯು ಹುಟ್ಟಿತು. ಹುಡುಗರೆಲ್ಲಾ ಬಲರಾಮಷ್ಣರ ಬಳಿ ಹೋಗಿ ನಡೆದುದನ್ನೆಲ್ಲ ತಿಳಿಸಿದರು. ಬಲರಾಮನಿಗೆ ದಿಗಿಲಾಯಿತು. ಅವನು ಆ ಒನಕೆಯನ್ನು ಪುಡಿ ಮಾಡಿಸಿ, ಪುಡಿಯನ್ನು ಸಮುದ್ರಕ್ಕೆ ಚೆಲ್ಲಿಸಿದನು. ವಿಧಿಯ ಮೇಲೆ ತಾವು ಜಯ ಸಾಧಿಸಿದೆವೆಂದೇ ಭಾವಿಸಿದ ಅವರು ನಡೆದ ಘಟನೆಯನ್ನು ಮರೆತೇಬಿಟ್ಟರು.ಷ್ಣನು ಮಾತ್ರ ಮರೆಯಲಿಲ್ಲ.

ಕುರುಕ್ಷೇತ್ರ ಮಹಾಯುದ್ಧ ನಡೆದು ಮೂವತ್ತಾರು ವರ್ಷಗಳ ನಂತರ ಆಕಾಶದಲ್ಲಿ ಕಾಣಿಸಿಕೊಂಡ ಉತ್ಪಾತಗಳನ್ನುಷ್ಣನೂ ನೋಡಿದನು. ಅವುಷ್ಣಿವಂಶದ ನಾಶವನ್ನು ಸೂಚಿಸುತ್ತಿವೆ ಎಂಬುದೂ ಅವನಿಗೆ ಅರ್ಥವಾಯಿತು.ಷ್ಣನ ಮನಸ್ಸಿಗೇನೂ ಆತಂಕವಾಗಲಿಲ್ಲ. ಅವನಿಗೆ ಬದುಕೇ ಸಾಕಾಗಿಹೋಗಿದ್ದಿತು. ಲೋಕದಲ್ಲಿ ಪಾಪವು ಹೆಚ್ಚಾಗಿರುವ ಕಾರಣದಿಂದ ಅದನ್ನು ಕಡಿಮೆ ಮಾಡುವುದಕ್ಕೆಂದು ಜನ್ಮತಳೆದಿದ್ದ ಅವನಿಗೆ ಇದನ್ನು ಬಿಟ್ಟುಹೋಗುವ ಮುನ್ನ ಇನ್ನೂ ನೋಡಬೇಕಾಗಿ ಉಳಿದಿರುವುದು ಇದೊಂದೇ ಆಗಿದ್ದಿತು. ಕಲಿಯುಗವು ಈಗಾಗಲೇ ತನ್ನ ಪಾದವನ್ನು ಊರಿ ಆಗಿತ್ತು; ಜನರು ಈಗಾಗಲೇ ತಮ್ಮ ಧರ್ಮಪ್ರಜ್ಞೆಯನ್ನು ಕಳೆದುಕೊಳ್ಳಲು ಆರಂಭಿಸಿದ್ದರು. ಕಲಿಯುಗ ಮುಗಿಯುವ ಹೊತ್ತಿಗೆ ತಾನು ಮತ್ತೆ ಹುಟ್ಟಿ ಬರಬೇಕಾಗಬಹುದು. ಆದರೆ ಅದಕ್ಕೆ ಮುಂಚೆ ತಾನೆಲ್ಲಿಂದ ಬಂದೆನೋ ಅಲ್ಲಿಗೊಮ್ಮೆ ಹೋಗಿ ಬರಬಹುದಲ್ಲ! ಆದರೆ ಗಾಂಧಾರಿಯ ಶಾಪ ಫಲಿಸುವುದನ್ನು ನೋಡದೆ ಹೊರಡುವಂತಿಲ್ಲ.ಷ್ಣನು ತನ್ನ ಜನಗಳನ್ನು ಕುರಿತು ಯೋಚಿಸಿದನು. ಅವರು ಋಜುಮಾರ್ಗವನ್ನು ಈಗಾಗಲೇ ತ್ಯಜಿಸಿದ್ದರು. ಅವರೆಲ್ಲರ ನಾಶಕ್ಕೆ ಕಾರಣವಾಗಲಿರುವ ದೊಡ್ಡ ಜಗಳಕ್ಕೆ ಸಿದ್ಧರಾಗುತ್ತಿದ್ದರು.

ಒಂದು ದಿನ, ಪದ್ಧತಿಯಂತೆ ಇಡೀ ಕುಟುಂಬವು ಶಂಕರನನ್ನು ಪೂಜಿಸುವುದಕ್ಕೆಂದು ಪ್ರಭಾಸತೀರ್ಥಕ್ಕೆ ಪ್ರವಾಸ ಹೊರಟಿತು. ಎಲ್ಲರೂ ಬಹಳ ಸಂತೋಷದಿಂದಿದ್ದರು,ಷ್ಣನಿಗೆ ಅನೇಕ ವರ್ಷಗಳ ಹಿಂದೆ ಪ್ರಭಾಸತೀರ್ಥಕ್ಕೆ ಬಂದಿದ್ದುದು ನೆನಪಾಯಿತು. ಅರ್ಜುನ ಆಗ ಸುಭದ್ರೆಯ ಉದ್ಯಾನವನದಲ್ಲಿದ್ದ.ಷ್ಣನು ಅವರಿಬ್ಬರಿಗೂ ಓಡಿಹೋಗುವುದಕ್ಕೆ ಅನುವುಮಾಡಿ ಕೊಟ್ಟು, ಸಂಗತಿ ಇತರರಿಗೆ ತಿಳಿಯದಂತೆ ಬಲರಾಮನನ್ನೂ ಇನ್ನಿತರರನ್ನೂ ಪ್ರಭಾಸತೀರ್ಥಕ್ಕೆ ಕರೆತಂದಿದ್ದ. ಆ ಘಟನೆ ನಡೆದು ಎಷ್ಟು ಕಾಲವಾಗಿ ಹೋಯಿತು! ಇದೇ ಅವರ ಕೊಟ್ಟಕೊನೆಯ ಪ್ರಭಾಸತೀರ್ಥ ಯಾತ್ರೆ ಆಗಲಿದೆ. ಇನ್ನು ತಾವು ಯಾರು ಇಲ್ಲಿಗೆ ಬರುವ ಸಾಧ್ಯತೆಯಿಲ್ಲ. ನಾಶವು ಬೇಗ ಬರಲೊಲ್ಲದೇಕೆ ಎಂದುಷ್ಣನೇ ಆಶಿಸಿದ. ಅವನಿಗೆ ಜುಗುಪ್ಸೆಯಾಗಿತ್ತು; ಅಲ್ಲದೆ ಲೋಕವನ್ನು ತಿದ್ದುವ ಭ್ರಮೆ ಬಿಟ್ಟುಹೋಗಿತ್ತು. ಈ ಹನೂಮನ್ನಾಟಕದಿಂದ ದೂರ ಹೋದರೆ ಸಾಕಾಗಿದೆ. ಜನರು ಪ್ರಭಾಸಕ್ಕೆ ರಥಗಳಲ್ಲಿ, ಮೇನೆಗಲಲ್ಲಿ, ಕುದುರೆಗಳ ಮೇಲೆ, ಕಾಲ್ನಡೆಯಲ್ಲಿ ಪ್ರವಾಹದೋಪಾದಿಯಲ್ಲಿ ಬಂದು ತಲುಪಿದರು. ಡೇರೆಗಳನ್ನು ಹಾಕಿಕೊಂಡು ಆ ರಾತ್ರಿ ಎಲ್ಲರೂ ತಮ್ಮ ತಮ್ಮ ಡೇರೆಗಳಲ್ಲಿ ಮಲಗಿದರು. ಮಾರನೆಯ ದಿನ ವಿವಿಧ ಕ್ರೀಡೆಗಳಲ್ಲಿ ಕಳೆಯಿತು. ದೊಡ್ಡ ಹಬ್ಬದ ಆಚರಣೆ ಅನೇಕ ದಿನಗಳವರೆಗೂ ನಡೆಯಿತು.

ಒಂದು ದಿನ,ಷ್ಟಾನ್ನವನ್ನುಂಡು, ಕಂಠಪೂರ್ತಿ ಕುಡಿದು, ಅವರು ಹಳೆಯ ಘಟನೆಗಳನ್ನು ಮೆಲುಕುಹಾಕುತ್ತಿದ್ದರು.ತವರ್ಮ ಸಾತ್ಯಕಿ ಮತ್ತಿತರರೆಲ್ಲಾ ಕುಡಿದಿದ್ದರು. ಇದ್ದಕ್ಕಿದ್ದಂತೆ ಸಾತ್ಯಕಿಗೆತವರ್ಮನನ್ನು ಲೇವಡಿ ಮಾಡಬೇಕೆನ್ನಿಸಿತು. ಅವನು ದುರ್ಯೋಧನನ ಕಡೆ ಸೇರಿದಾಗಿನಿಂದ ಇವನಿಗೆ ಅವನ ಮೇಲೆ ಎಂಥದೋ ಸಿಟ್ಟು, ತಿರಸ್ಕಾರ, ಅಸಹನೆ. ಕುಡಿತದ ಅಮಲಿನಲ್ಲಿ, ವಿಧಿಪ್ರೇರಿತನಾಗಿ, ಮಾತಿನಲ್ಲಿ ಕುರುಕ್ಷೇತ್ರ ಯುದ್ಧದ ವಿಷಯವನ್ನೆತ್ತಿ, “ಮಲಗಿರುವ ಶತ್ರುಗಳನ್ನು ಕೊಲ್ಲುವ, ಶತ್ರುವಿನ ಬಿಡದಿಗೆ ಕಳ್ಳನಂತೆ ಬೆಂಕಿ ಕೊಟ್ಟು ಪರಿಣಾಮ ಎದುರಿಸುವ ಧೈರ್ಯವಿಲ್ಲದೆ ತನ್ನ ದೇಶಕ್ಕೆ ಓಡಿಹೋಗುವ ಇನ್ನೊಬ್ಬ ಕ್ಷತ್ರಿಯನನ್ನು ನಾನು ಈವರಿಗೂ ಕಾಣಲಿಲ್ಲ!” ಎಂದನು. ಕೃತವರ್ಮನಿಗೆ ರೇಗಿಹೋಯಿತು. ಅವನೂ ಕಂಠಪೂರ್ತಿ ಕುಡಿದಿದ್ದನು. ಇವನು ಭೂರಿಶ್ರವಸ್ಸನ್ನು ಕೊಂದ ಸಂಗತಿಯನ್ನು ಎತ್ತಿ ಆಡುವುದಕ್ಕಾರಂಭಿಸಿದನು. ಕೆಲವರು ಇವನು ಕಡೆಗೂ ಕೆಲವರು ಅವನ ಕಡೆಗೂ ಸೇರಿಕೊಂಡು ವಾದ ಮಾಡಲಾರಂಭಿಸಿದರು. ಜನರಲ್ಲಿ ಎರಡು ಪಕ್ಷಗಳಾದವು. ವಾದ ಹೋಗಿ ಹೊಡೆದಾಟಕ್ಕೆ ಮೊದಲಾಯಿತು.

ಅದೊಂದು ಕುಡಿದವರ ನಡುವಣ ಬೀದಿ ಜಗಳ.ಷ್ಣನನ್ನು ಹೆತ್ತಷ್ಣಿವಂಶದ ಈ ಮಟ್ಟಕ್ಕೆ ಇಳಿಯಿತು.ಷ್ಣನು ನೋಡುತ್ತಲೇ ಇದ್ದನು. ಅವನ ಮಗ ಪ್ರದ್ಯುಮ್ನ ಸಾತ್ಯಕಿಯ ಕಡೆ ಸೇರಿಕೊಂಡನು. ಸಾತ್ಯಕಿಯುತವರ್ಮನ ಮೇಲೇರಿ ಹೋಗಿ, “ ಕುರುಕ್ಷೇತ್ರಯುದ್ಧದ ಮಹಾವೀರನಾದ

ಷ್ಟದ್ಯುಮ್ನನ ಸಾವಿನ ಸೇಡನ್ನು ನಾನಿಂದು ತೀರಿಸಿಕೊಳ್ಳುವೆ” ಎಂದವನೇತವರ್ಮನ ಕತ್ತನ್ನು ಕತ್ತರಿಸಿ ಹಾಕಿಬಿಟ್ಟನು. ಬೀದಿಜಗಳ ಹೋಗಿ ದೊಡ್ಡ ಹೋರಾಟಕ್ಕೇ ಇಟ್ಟುಕೊಂಡಿತು. ಎಲ್ಲರೂ ಒಬ್ಬರ ಮೇಲೆ ಒಬ್ಬರು ಬೀಳುತ್ತ, ಸಿಕ್ಕಿದ್ದನ್ನು ತೆಗೆದುಕೊಂಡು ಸಿಕ್ಕವರಿಗೆ ಸಿಕ್ಕ ಹಾಗೆ ಚಚ್ಚಲಾರಂಭಿಸಿದರು. ಆಯುಧಗಳು ಇಲ್ಲದ್ದರಿಂದ, ಸಮುದ್ರದ ದಡದಲ್ಲಿ ಬೆಳೆದಿದ್ದ ಪೊದೆಗಳನ್ನೆ ಕಿತ್ತು ಹೊಡೆಯಲು ಬಳಸತೊಡಗಿದರು. ಆ ಪೊದೆಗಳು ಬೆಳೆದಿದ್ದ ಜಾಗದಲ್ಲಿಯೇ ಬಲರಾಮನು ಸಾಂಬನ ಒನಕೆಯನ್ನು ಪುಡಿಮಾಡಿಸಿ ಚೆಲ್ಲಿಸಿದ್ದುದು. ಶಾಪದಂತೆ ಅವುಗಳ ಹೊಡೆತದಿಂದಲೇ ಜನರು ಸಾಯಲಾರಂಭಿಸಿದರು.ಷ್ಣನ ಕಣೆದುರಿಗೇ ಸಾತ್ಯಕಿ ಪ್ರದ್ಯುಮ್ನರು ಸತ್ತರು. ಇನ್ನೇನು ಉಳಿಯಿತು. ಇನ್ನೇಕೆ ಬದುಕಬೇಕು? ಕೃಷ್ಣ ತಾನೂ ಕೆಲವು ಪೊದೆಗ

ನ್ನು ಕಿತ್ತು ಜನರ ಮೇಲೆ ಎಸೆದನು. ಒಂದೊಂದು ಪೊದೆಯೂ ಒಂದೊಂದು ಮಾರಕಾಸ್ತ್ರವಾಯಿತು. ಪೊದೆಗಳು ಕಿತ್ತಷ್ಟೂ ಹೆಚ್ಚಿದವು. ಕೆಲವೇ ಕ್ಷಣಗಳಲ್ಲಿ ಒಬ್ಬರೂ ಉಳಿಯದಂತೆ ಎಲ್ಲರೂ ನಾಶವಾದರು. ಅದು ಆಗಿದ್ದು ಕೃಷ್ಣ ಪೊದೆಯನ್ನು ಎಸೆಯಲಾರಂಭಿಸಿದ ಮೇಲೆ. ಕೃಷ್ಣನ ಮುಖವು ಭೀಕರವಾಗಿದ್ದಿತು; ಸಾಕ್ಷಾತ್ ಮೃತ್ಯುದೇವತೆಯಂತಿದ್ದನು.

ಬಲರಾಮ, ಕೃಷ್ಣ, ದಾರುಕ ಈ ಮೂವರನ್ನುಳಿದು ಉಳಿದವರೆಲ್ಲರೂ ಸತ್ತರು. ಬಲರಾಮನು ಅಲ್ಲಿ ಕಾಣಿಸಲಿಲ್ಲ, ದಾರುಕನೊಂದಿಗೆ ಕೃಷ್ಣನು ಅವನನ್ನು ಹುಡುಕಿಕೊಂಡು ಹೊರ

ನು. ಸಮುದ್ರದ ದಡದಲ್ಲಿನ ಮರವೊಂದಕ್ಕೆ ಒರಗಿಕೊಡು ನಿಂತಿದ್ದ ಅವನನ್ನು ನೋಡಿದರು. ಜಗಳದ ಪ್ರಾರಂಭದಲ್ಲಿಯೇ ಜುಗುಪ್ಸೆಗೊಂಡ ಬಲರಾಮನು ಆಗಲೇ ಅಲ್ಲಿಗೆ ಬಂದಿದ್ದನು. ಯೋಗದಿಂದ ದೇಹತ್ಯಾಗ ಮಾಡಲು ನಿರ್ಧರಿಸಿ, ಯೋಗಮುದ್ರೆಯಲ್ಲಿ ಕುಳಿತಿದ್ದನು. ಕೃಷ್ಣನು ಅದನ್ನು ನೋಡಿ,“ದಾರುಕ, ಹಸ್ತಿನಾಪುರಕ್ಕೆ ಈಗಲೇ ಹೊರಡು. ಪ್ರಭಾಸದಲ್ಲಿ ನಡೆದುದನ್ನೆಲ್ಲಾ ನನ್ನ ಪ್ರೀತಿಯ ಪಾಂಡವರಿಗೆ ತಿಳಿಸು. ವೃಷ್ಣಿವಂಶದ ನೈತಿಕ ಅಧ;ಪತನವನ್ನು ಯುಧಿಷ್ಠಿರನಿಗೆ ತಿಳಿಸು. ಮಹಾವೀರರೆನಿಸಿಕೊಂಡ ಮಹಾ ವಿವೇಕಿಗಳೆಲ್ಲ ಬೀದಿಜಗಳದಲ್ಲಿ, ದೊಂಬಿಯಲ್ಲಿ ಸತ್ತರೆಂದು ತಿಳಿಸು. ಋಷಿಗಳ ಶಾಪವನ್ನು ತಿಳಿಸಿ. ಗಾಂಧಾರಿಯ ಶಾಪವನ್ನೂ ನೆನಪಿಸು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅರ್ಜುನನನ್ನು ದ್ವಾರಕೆಗೆ ಕರೆತಂದು, ಅವನಿಗೆ ಅಲ್ಲಿರುವ ಹೆಂಗಸರು ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳಲು ಹೇಳು. ತಕ್ಷಣ ಹೊರಟು ಬಾ ಎಂದು ಹೇಳು” ಎಂದನು. ದಾರುಕನು ಭಾರವಾದ ಹೃದಯದಿಂದ ಕೃಷ್ಣನನ್ನು ಬೀಳ್ಕೊಂಡು ಹಸ್ತಿನಾಪುರದ ಕಡೆಗೆ ಹೊರಟನು. ಕೃಷ್ಣನನು ಬಲರಾಮನ ಬಳಿಗೆ ಹೋಗಿ, “ನನಗಾಗಿ ಸ್ವಲ್ಪಹೊತ್ತು ಕಾದುಕೊಂಡಿರು. ನಾನು ದ್ವಾರಕೆಗೆ ಹೋಗಿ ಹೆಂಗಸರು ಮಕ್ಕಳನ್ನು ಅಪ್ಪನ ರಕ್ಷೆಯಲ್ಲಿ ಬಿಟ್ಟುಬರುತ್ತೇನೆ. ನಾನು ಹಿಂದಿರುಗಿದೊಡನೆಯೇ ನಾವಿಬ್ಬರೂ ಹೋಗೋಣ” ಎಂದನು.

ಅದರಂತೆ ಕೃಷ್ಣನನು ದ್ವಾರಕೆಗೆ ಹೋಗಿ ವಸುದೇವನನ್ನು ಕಂಡು, “ನಾನು ಅರ್ಜುನನೆಗೆ ಹೇಳಿಕಳಿಸಿದ್ದೇನೆ. ಅವರು ಬೇಗನೆ ಬಂದು ಇದೆಲ್ಲವನ್ನೂ ನೋಡಿಕೊಳ್ಳುತ್ತಾನೆ. ನಾನು ಹೋಗಬೇಕು. ಬಲರಾಮನು ನನಗಾಗಿ ಕಾಯುತ್ತಿದ್ದಾನೆ. ಅವನೊಂದಿಗೆ ನಾನು ಹೋಗುವೆ. ಜನರಿಲ್ಲದ ಈ ದ್ವಾರಕೆಯನ್ನು ನಾನು ನೋಡಲಾರೆ. ನಾವಿಬ್ಬರೂ ತಪಸ್ಸಿಗೆ ಹೋಗುತ್ತಿದ್ದೇವೆ” ಎಂದು ತಂದೆಯ ಪಾದಗಳಿಗೆ ನಮಸ್ಕರಿಸಿ, ತಿರುಗಿಯೂ ನೋಡದೆ, ವೇಗವಾಗಿ ಬಲರಾಮನಿದ್ದಲ್ಲಿಗೆ ಬಂದನು. ಇವನನ್ನು ನೋಡಿದೊಡನೆ ಬಲರಾಮನು ಸಮಾಧಿಸ್ಥನಾದನು. ಅವನ ಬಾಯಿಂದ ಒಂದು ಮಹಾಸರ್ಪವು ಹೊರಟುಬಂದು, ಸಮುದ್ರದೊಳಕ್ಕೆ ಸೇರಿಹೋಯಿತು. ಕೃಷ್ಣನು ವಿಷ್ಣುವಿನ ಅವತಾರವೆಂದೂ, ಬಲರಾಮನು ವಿಷ್ಣು ಮಲಗಿರುವ ಆದಿಶೇಷನ ಅವತಾರವೆಂದೂ ಹೇಳುವರು. ಕೃಷ್ಣನೆಗೆ, ಆದಿಶೇಷನು ಹೊರಟುಹೋದ ಮೇಲೆ ಇನ್ನು ತನಗೇನು ಕೆಲಸ? ತಾನು ಹೋಗುವ ಕಾಲವೂ ಸಮೀಪಿಸಿದೆ ಎನ್ನಿಸಿತು.

* * * * 


ಸಂಜೆ ಸಮೀಪಿಸುತ್ತಿತ್ತು. ತನ್ನ ಯೋಚನೆಗಳಲ್ಲಿಯೇ ಮುಳುಗಿದ್ದ ಕೃಷ್ಣನು ಶತಪಥ ಹಾಕುತ್ತಿದ್ದನು. ಅವನ ಜೀವನವೂ ಸಂಧ್ಯೆಯನ್ನು ಸಮೀಪಿಸಿತ್ತು. ತಾನು ಏನು ಮಾಡಬೇಕೆಂದುಕೊಂಡು ಬಂದಿದ್ದನೋ ಅದನ್ನೆಲ್ಲ ಮಾಡಿ ಮುಗಿಸಿಯಾಗಿತ್ತು. ಅವನ ಮನಸ್ಸು ಹಿಂದಕ್ಕೋಡಿ ಗೋಕುಲದ ದಿನಗಳನ್ನು ಸ್ಮರಿಸಿತು.

ಶೋದೆ, ತನ್ನ ಸಾಕುತಾಯಿ. ಅದೆಷ್ಟು ಪ್ರೀತಿ ಅವಳಿಗೆ ತನ್ನನ್ನು ಕಂಡರೆ ಮಕರಂದಕ್ಕಾಗಿ ಹೂವಿನ ಬಳಿಗೆ ಹೋಗುವ ಜೇನಿನಂತೆ ಅವನ ಯೋಚನೆ ರಾಧೆಯ ಸುತ್ತ ಸುಳಿಯಿತು. ಆ ದಿವ್ಯಪ್ರೇಮಕ್ಕೆ ಸಮಾನವಾದದ್ದನ್ನು ಅವನು ಬೇರೆಲ್ಲಿಯೂ ಕಂಡಿರಲಿಲ್ಲ. ಅವನ ಮನಸ್ಸು ಅಲ್ಲಿಂದ ಮಥುರೆಗೆ ಓಡಿ ಕಂಸನನ್ನು ಕೊಂದ ಸಂದರ್ಭವನ್ನು ನೆನೆಯಿತು. ಸಮುದ್ರದ ಅಲೆಗಳು ಒಂದಾದ ಮೇಲೊಂದು ಉರುಳಿ ಬರುವಂತೆ ವರ್ಷಗಳು ಒಂದಾದ ಮೇಲೆ ಒಂದರಂತೆ ತನ್ನ ಕಣ್ಣೆದುರಿಗೆ ಉರುಳಿಹೋದವು. ಪಾಂಡವರು ಅವನ ಬಗೆಗಣ್ಣ ಮುಂದೆ ತೇಲಿಬಂದರು. ಅವರೊಡನೆ ಮೊದಲ ಭೇಟಿಯ ಆ ಸಂದರ್ಭ. ಅನಂತರ ಅವರ ಬದುಕಿನ ಯಾತನಾಭರಿತ ಘಟನೆಗಳು ಒಂದೊಂದೂ ನೆನಪಿಗೆ ಬಂದವು. ಅದಾದ ಮೇಲೆ ಯುದ್ಧ; ಕ್ಷತ್ರಿಯರ ಸಾವು. ಆಮೇಲೆ ದುರ್ಯೋಧನನ ಸಾವು. ಗಾಂಧಾರಿಯ ಶಾಪ. ಅದು ಪೂರೈಸುವವರೆಗೆ ತಾನು ಬದುಕಿರಬೇಕಾದ ಅಗತ್ಯವಿತ್ತು! ಅಭಿಮನ್ಯುವಿನ ಆ ಸತ್ತ ಮಗು, ತಾನು ಅದಕ್ಕೆ ತನ್ನ ಜೀವನವನ್ನೇ ಧಾರೆಯೆರೆದಿದ್ದು. ಅಷ್ಟೊಂದು ಕಷ್ಟಪಟ್ಟು ಅದನ್ನು ಸಾಧಿಸಿದೆ. ಮೊದಲಿನಿಂದ ಕೊನೆಯವರೆಗೂ ಪಾಂಡವರನ್ನು ಕಾಪಾಡಿದೆ. ಒಂದು ದುರದೃಷ್ಟದ ಸಂಗತಿಯೆಂದರೆ ಅರ್ಜುನನನ್ನು ಈಗ ಭೇಟಿ ಮಾಡಲಾಗುತ್ತಿಲ್ಲ. ಅರ್ಜುನನನ್ನು ನೆನೆಸಿಕೊಂಡೊಡನೆ ಕೃಷ್ಣನ ಮುಖದ ಮೇಲೆ ಸುಂದರ ಮುಗುಳ್ನಗೆಯೊಂದು ತೇಲಾಡಿತು. ಹೌದಲ್ಲ, ಅವನ ಕನಸಿನೊಳಕ್ಕೆ ಜಾರಿ ಅವನನ್ನು ಭೇಟಿ ಮಾಡಬಹುದು. ಕೃಷ್ಣ ಭಾವಸಮಾಧಿಯಲ್ಲಿ ಕುಳಿತ. ಪ್ರಬಲ ಇಚ್ಛೆಯನ್ನು ಬಳಸಿ ಅರ್ಜುನನ ಮನಸ್ಸನ್ನು ತನ್ನ ಮನಸ್ಸಿನ ಮೂಲಕ ಮುಟ್ಟಿದ. ತುಂಬ ಸಂತೋಷವೆನಿಸಿತು. ಅರ್ಜುನ ಒಬ್ಬನೇ ತನ್ನ ಕೊಠಡಿಯಲ್ಲಿ ಕುಳಿತಿದ್ದಾನೆ. ಇದ್ದಕ್ಕಿದ್ದಂತೆ ಕೃಷ್ಣನ ನೆನಪಾಗಿದೆ. ಕೃಷ್ಣನೇ ಮಾತನಾಡುತ್ತಿದ್ದಾನೆ ಎಂದೆನಿಸಿದೆ. “ಮಲಗಿಕೋ ಅರ್ಜುನ, ಮಲಗಿಕೋ. ನಾನು ನಿನ್ನೊಡನೆ ಮಾತನಾಡಬೇಕು” ಎನ್ನುತ್ತಿದ್ದಾನೆ. ಅವನು ಮಲಗುತ್ತಾನೆ. ಗಾಢನಿದ್ರೆ ಬರುತ್ತದೆ. ಹಿಂದೆ ಅಭಿಮನ್ಯು ಸತ್ತ ರಾತ್ರಿ ಬಂದಿದ್ದಂತೆ ಅವನ ಕನಸಿನಲ್ಲಿ ತಾನು ಬರುತ್ತಾನೆ. ಅರ್ಜುನನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು, “ಅರ್ಜುನ, ಈ ಪ್ರಪಂಚದಲ್ಲಿ ಪ್ರತಿಯೊಂದರ ಉಗಮವೂ ಒಂದು ಉದ್ದೇಶವನ್ನು ಸಾಧಿಸುವುದಕ್ಕೆ ಎಂದು ನಾನು ಹಿಂದೆ ಹೇಳಿದ್ದು ನೆನಪಿದೆಯೆ? ತನ್ನ ಉದ್ದೇಶ ಪೂರ್ಣಗೊಂಡೊಡನೆ ಅದು ಸತ್ತು ಹೋಗಬೇಕು, ಸತ್ತು ಹೋಗುತ್ತದೆ” ಎಂದು ತಾನು ಕೇಳುತ್ತಾನೆ. ಅರ್ಜುನನು, “ಹೌದು ಕೃಷ್ಣ, ನನ್ನ ರಥ ಉರಿದು ಹೋದಾಗ ನೀನು ಹಾಗೆ ಹೇಳಿದ್ದೆ” ಎನ್ನಲು, ತಾನು ಹಾಗೆಯೇ ಪ್ರತಿಯೊಬ್ಬ ಮನುಷ್ಯನೂ ಈ ವಿಚಿತ್ರವಾದ ಜೀವನಯಾತ್ರೆಯಲ್ಲಿ ಸಾಗುತ್ತಿರುತ್ತಾನೆ. ಅವನು ಈ ಪ್ರಪಂಚಕ್ಕೆ ಬಂದಿರುವುದರ ಹಿಂದೆ ಒಂದು ಉದ್ದೇಶವಿರುತ್ತದೆ. ಆ ಉದ್ದೇಶ ಪೂರ್ಣಗೊಂಡೊಡನೆ ಈ ಭೂಮಿಗೆ ಆ ಮನುಷ್ಯ ಬೇಡವಾಗುತ್ತಾನೆ. ನಮ್ಮೆಲ್ಲರ ವಿಷಯದಲ್ಲಿಯೂ ಇದು ಹಾಗೆಯೇ. ನಾನೂ ಬಂದಿದ್ದು ಒಂದು ಉದ್ದೇಶ ಸಾಧನೆಗಾಗಿಯೇ. ಅದಿನ್ನೂ ಪೂರ್ಣಗೊಂಡಿಲ್ಲ. ಇನ್ನೂ ಸ್ವಲ್ಪ ಉಳಿದಿದೆ. ಪೂರ್ಣವಾದ ಕ್ಷಣದಲ್ಲಿಯೇ ನಾನು ಸಾಯುತ್ತೇನೆ. ನೀನೂ ಅಷ್ಟೆ, ನಿನ್ನ ಸೋದರರೂ ಅಷ್ಟೆ. ಅದೆಲ್ಲವೂ ನಿನಗೆ ನೆನಪಿದೆಯೆ?” ಎನ್ನುತ್ತೇನೆ. ಅರ್ಜುನ ಹೌದು, ನೆನಪಿದೆ ಎನ್ನುತ್ತಾನೆ. ಆಗ ತಾನು,“ಅರ್ಜುನ, ನನ್ನ ಜೀವನದ ಉದ್ದೇಶ ಪೂರ್ಣವಾಯಿತು. ನಾನಿನ್ನು ತೆರಳುವೆ. ನೀನೂ ಬಾ. ನಾವಿಬ್ಬರೂ ದೂರವಿರಲಾರೆವು” ಎನ್ನುತ್ತೇನೆ. ಅದಕ್ಕೆ ಅವನು,“ಕೃಷ್ಣಾ, ನೀನು ಇದೇನು ಹೇಳುತ್ತಿರುವೆ? ನನಗೆ ನೀನು ಹೇಳುತ್ತಿರುವುದೇನೂ ತಿಳಿಯುತ್ತಿಲ್ಲ” ಎಂದು ಹಲುಬುತ್ತಾನೆ. ತಾನು ನಕ್ಕು,“ಪ್ರಿಯ ಗೆಳೆಯ, ನಾನು ಹೋಗುವ ಮೊದಲು ನಿನ್ನನ್ನು ಒಂದು ಸಾರಿ ನೋಡಬೇಕು ಅನ್ನಿಸಿತಪ್ಪ. ಈಗ ನೋಡಿದೆನಲ್ಲ, ಅಷ್ಟೇ ಸಾಕು. ನನಗೆ ತೃಪ್ತಿಯಾಯಿತು. ಇನ್ನು ನಾನು ಹೇಳಿದ ಮಾತಿನ ಅರ್ಥ: ಅದು ನಿನಗೆ ನಾಳೆ ತಿಳಿದೀತು” ಎನ್ನುತ್ತೇನೆ. ಅರ್ಜುನನ ಕನಸಿನಿಂದ ತಾನು ಕರಗುವ ಮುನ್ನ ಅದೇ ತನ್ನ ಎಂದಿನ ದಿವ್ಯತೆಯ ಮುಗುಳ್ನಗು ಮುಖದ ಮೇಲೆ ಉಳಿದಿರುತ್ತದೆ.

ಕೃಷ್ಣ ಈಗ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತ ಮುಂದಕ್ಕೆ ನಡೆದ. ತಾನು ಒಬ್ಬ ದೇವ. ತನ್ನ ಸೋದರ ಯೋಗದಿಂದ ಪ್ರಾಣತ್ಯಾಗ ಮಾಡಿದಂತೆಯೇ ತಾನೂ ಮಾಡಬಹುದು. ಆದರೆ ತನ್ನದು ಮಾನವಶರೀರದಲ್ಲಿನ ಅವತರಣ. ತನ್ನ ಪಾತ್ರಕ್ಕೆ ಒಪ್ಪುವ ಹಾಗೆ ತನ್ನ ನಟನೆ ಇರಬೇಕಲ್ಲವೆ? ತಾನು ಋಷಿಯಂತೆ ಪ್ರಾಣ ಬಿಡುವ ಬದಲು ಸಾಧಾರಣ ಮಾನವನಂತೆ ಪ್ರಾಣ ಬಿಡುವುದೇ ಶೊಭೆ. ಸಾವಿಗೊಂದು ಕಾರಣ, ಒಂದು ನೆಪ, ಅಗತ್ಯ. ಇದನ್ನು ಯೊಚಿಸಿಕೊಂಡೇ ಕೃಷ್ಣನು ಭೂಮಿಯ ಮೇಲೆ ಒರಗಿದ. ಗಾಢನಿದ್ರೆ ಬಂತು.

ಅಲ್ಲೇ ಸಮೀಪದಲ್ಲಿ ಬೇಟೆಗಾರನೊಬ್ಬನಿದ್ದ. ಬಿಲ್ಲುಬಾಣಗಳೊಡನೆ ಹಾದುಹೊಗುತ್ತಿದ್ದ ಅವನು ನಿದ್ರಿಸುತಿದ್ದ ಕೃಷ್ಣನನ್ನು ನೋಡಿದ. ದೂರದಿಂದ ಅವನಿಗೆ ಯಾವುದೋ ಪ್ರಾಣಿ ನಿದ್ರಿಸುತ್ತಿರುವಂತೆ ತೋರಿತು. ಕೃಷ್ಣನ ಪೀತಾಂಬರದಿಂದಾಗಿ ಅವನಿಗೆ ಜಿಂಕೆ ಎನಿಸಿರಬೇಕು. ಹಾಗೆಂದು ಕೋಡೇ ಗುರಿಯಿಟ್ಟು ಬಾಣಪ್ರಯೋಗ ಮಾಡಿದ. ಅದು ಕೃಷ್ಣನ ಕಾಲಿನ ಹೆಬ್ಬೆರಳಿಗೆ ಚುಚ್ಚಿಕೊಂಡಿತು. ಕೃಷ್ಣನಿಗೆ ದೂರ್ವಾಸ ಮಹರ್ಷಿಯು ಕಾಲಿನ ಹೆಬ್ಬೆರಳುಗಳ ಹೊರತಾಗಿ ಮೈಯಲ್ಲಿ ಉಳಿದೆಲ್ಲ ಭಾಗಗಳೂ ಅಭೇದ್ಯವಾಗಿರಲಿ ಎಂದು ವರ ಕೊಟ್ಟಿದ್ದ. ಒಂದು ಸಲ ಈ ಬೇಟೆಗಾರ ಸಮುದ್ರದ ದಂಡೆಯಲ್ಲಿ ನಡೆಯುತ್ತಿದ್ದಾಗ ಸಿಕ್ಕಿದ್ದ ಒಂದು ಕಬ್ಬಿಣದ ಚೂರನ್ನು ಈ ಬಾಣದ ತಲೆಯನ್ನಾಗಿ ಬಳಸಿಕೊಂಡಿದ್ದ. ಆ ಕಬ್ಬಿಣದ ಚೂರು ಬಲರಾಮ ಪುಡಿಮಾಡಿಸಿ ಬಿಸುಡಿಸಿದ್ದ ಒನಕೆಯ ಒಂದು ಚೂರಾಗಿತ್ತು. ಋಷಿಗಳ ಶಾಪದಂತೆ ವೃಷ್ಣಿವಂಶದವನಾದ ಕೃಷ್ಣನಿಗೂ ಅದೇ ಒನಕೆಯ ಚೂರು ನೆಪವಾಯಿತು.

ಕೃಷ್ಣನಿಗೆ ತುಂಬಾ ನೋವಾಯಿತು. ಹಾ ಎಂದು ಕೂಗಿಕೊಂಡ. ಬೇಟೆಗಾರನು ಅಚ್ಚರಿಯಿಂದ ಓಡಿಬಂದ. ನೋಡುತ್ತಾನೆ, ಜಿಂಕೆಯ ಬದಲಿಗೆ ಇಲ್ಲಿರುವುದು ಪೀತಾಂಬರಧಾರಿ ಕೃಷ್ಣ! ಅವನಿಗೆ ತಾನು ಇದೇನು ಮಾಡಿಬಿಟ್ಟೆ ಎಂದು ಬಹಳ ಹೆದರಿಕೆಯಾಯಿತು. ಕೃಷ್ಣನೇ ನಗುತ್ತ,“ಹೆದರಬೇಡವಯ್ಯ, ನೀನು ನನಗೆ ಬಹು ದೊಡ್ಡ ಉಪಕಾರವನ್ನೇ ಮಾಡಿರುವೆ. ಹೇಗೆ ಸಾಯಬೇಕು ಎಂಬ ನನ್ನ ಕೊನೆಯ ಸಮಸ್ಯೆಯನ್ನು ಪರಿಹರಿಸಿರುವೆ. ಮಿತ್ರ, ಸಮಾಧಾನದಿಂದ ಮನೆಗೆ ಹೋಗು. ನಿನ್ನ ಈ ಕಾರ್ಯದಿಂದ ನಿನಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ!” ಎಂದ. ಬೇಟೆಗಾರ ತನಗೆ ತಿಳಿದ ಎಲ್ಲ ಉಪಚಾರ ಮಾಡಿದರೂ ಪ್ರಯೋಜನವಾಗಲಿಲ್ಲ. ಯುಗಾವತಾರನಾದ ಕೃಷ್ಣನ ದೇಹತ್ಯಾಗ ಆಗಿತ್ತು. ಅವನು ಆತ್ಮವು ಇಡೀ ಭೂಮಿಯನ್ನೇ ಜ್ಯೋತಿರೂಪದಲ್ಲಿ ಬೆಳಗುತ್ತ ಆಕಾಶದಲ್ಲಿಲೀನವಾಯಿತು. ಕೃಷ್ಣನು ಈ ಪ್ರಪಂಚದಿಂದ ಕಣ್ಮರೆಯಾದ. ಅವನು ಬಂದ ಉದ್ದೆಶ ಪೂರ್ಣಗೊಂಡಿತ್ತು; ಈ ಭೂಮಿಗೆ ಇನ್ನು ಅವನ ಅವಶ್ಯಕತೆ ಇರಲಿಲ್ಲ. ತಾನು ಎಲ್ಲಿಂದ ಬಂದಿದ್ದನೋ ಅಲ್ಲಿಗೇ ಹಿಂದಿರುಗಿದ. ಲೋಕದ ಪಾಲಿಗೆ ಇನ್ನು ಕೃಷ್ಣನಿಲ್ಲ. ಪ್ರಾಣವಿಲ್ಲದ ಶರೀರ ಮಾತ್ರ ಅಲ್ಲಿತ್ತು. ಭೂಮಿ ಪರಿಮಳವನ್ನು ಕಳೆದುಕೊಂಡು ಒಂದು ಪುಷ್ಪದಂತಾಗಿ ಹಿಂದಕ್ಕುಳಿಯಿತು.

* * * * 


ದಾರುಕನು ವೇಗವಾಗಿ ರಥವನ್ನೋಡಿಸಿಕೊಂಡು ಹಸ್ತಿನಾಪುರಕ್ಕೆ ಹೋದ. ಅಲ್ಲಿ ಅವರಿಗೆ ಪ್ರಭಾಸತೀರ್ಥದಲ್ಲಿ ನಡೆದ ಘೋರ ದುರಂತವನ್ನು ವಿವರಿಸಿದ. ಯುಧಿಷ್ಠಿರನಿಗೆ ಆ ಕ್ಷಣಕ್ಕೆ ಗಾಂಧಾರಿಯ ಶಾಪ ಮರೆತುಹೋಗಿತ್ತು. ಪಾಂಡವರು ದು:ಖದಿಂದ ನಿಶ್ಚೇಷ್ಟಿತರಾದರು. ಈವರೆಗೆ ಅವರು ಎಷ್ಟೇ ಕಷ್ಟಪಟ್ಟಿದ್ದರೂ, ಕೃಷ್ಣನನ್ನು ಸ್ಮರಿಸಿಕೊಂಡೊಡನೆ ಕಷ್ಟವೆಲ್ಲ ಮರೆತು ಹೋಗುತ್ತಿತ್ತು; ಮನಸ್ಸಿಗೆ ಬಲ ಬರುತ್ತಿತ್ತು. ಆದರೆ ಈಗ ಏನು ಉಳಿದಿದೆ? ಯೋಚಿಸಲೇ ಆಗುತ್ತಿಲ್ಲ. ಮೌನವಾಂತ ದು:ಖದಲ್ಲಿ ಅರ್ಜುನನು ದ್ವಾರಕೆಗೆ ಓಡಿಬಂದ. ಅವನಿಗೆ ನಿನ್ನೆಯ ಕನಸಿನ ನೆನಪಾಯಿತು. ಕೃಷ್ಣನು, ”ನಾಳೆ ನನ್ನ ಮಾತುಗಳ ಅರ್ಥ ನಿನಗಾಗುವುದು” ಎಂದಿದ್ದ. ಕೃಷ್ಣ ಇನ್ನಿಲ್ಲವೆಂಬ ಸತ್ಯ ಅರ್ಜುನನ ಹೃದಯವನ್ನು ಕಲ್ಲಾಗಿಸಿತ್ತು. ದ್ವಾರಕೆಗೆ ಬಂದವನೇ ವಸುದೇವನ ಬಳಿಗೆಹೋದ. ವೃಷ್ಣಿವಂಶದ ಮೇಲೆ ಬಂದೆರಗೆದ ದುರದೃಷ್ಟವನ್ನೂ ದುರಂತದ ವಿವರಗಳನ್ನು ಕೇಳಿ ತಿಳಿದುಕೊಂಡ.

ಅನಂತರ ಅರ್ಜುನ ಪ್ರಭಾಸತೀರ್ಥಕ್ಕೆ ಹೋದ. ಅಲ್ಲಿ ಎಲ್ಲರೂ-ಸಾತ್ಯಕಿ, ಪ್ರದ್ಯುಮ್ನ, ತನ್ನ ಗೆಳೆಯ ಗದ ಇತ್ಯಾದಿ ಎಲ್ಲರೂ- ಸತ್ತು ಮಲಗಿದ್ದರು. ಬಲರಾಮನು ತಪಸ್ಸಿಗೆ ಹೋದನೆಂಬ ಕೃಷ್ಣನ ಮಾತನ್ನು ವಸುದೇವನಿಂದ ಕೇಳಿ ತಿಳಿದಿದ್ದ ಅರ್ಜುನನ ಇವರಿಬ್ಬರನ್ನು ಹುಡುಕಿಕೊಂಡು ಹೊರಟ. ಬಲರಾಮ ಸತ್ತು ಒರಗಿರುವುದು ಕಾಣಿಸಿತು. ಎಲ್ಲಕ್ಕೂ ಅರ್ಜುನನು, ಕಲ್ಲಾಗಿದ್ದ. ದಾರುಕನೂ ಅವನೂ ಕೃಷ್ಣನಿಗಾಗೆ ಹುಡುಕಾಡಿದರು. ಕೊನೆಗೆ ಕಾಲ ಹೆಬ್ಬೆರಳಿಗೆ ಬಾಣದ ಗಾಯವಾಗಿ ಮಲಗಿದ್ದ ಕೃಷ್ಣನೂ ಕಾಣಿಸಿದ.

ಅರ್ಜುನ ಕೃಷ್ಣನನ್ನೇ ಬಹಳ ಹೊತ್ತು ನೋಡಿದ. ನೋಡಿಯೇ ನೋಡಿದ. ಅವನ ಪಾಲಿಗೆ ಕೃಷ್ಣನ ಸಾವಿನೊದಿಗೆ ಈ ಲೋಕದ ಸೌಂದರ್ಯವೆಲ್ಲವೂ ಸತ್ತುಹೋಗಿತ್ತು. ಅರ್ಜುನನಿಗೆ ತಾನು ಮಾಡಬೇಕಾದ ಕೆಲಸ ನೆನಪಾಯಿತು. ಕೃಷ್ಣನು ಬೇಗ ಬಾರೆಂದು ಹೇಳಿ ಕಳುಹಿಸಿದ್ದನಲ್ಲವೆ?ಅವನು ಕಾಯುತ್ತಿರಬಹುದು. ಬೇಗ ಹೋಗಬೇಕು.ಕೃಷ್ಣ ಬಲರಾಮರ ದೇಹಗಳನ್ನು ದ್ವಾರಕೆಗೆ ಸಾಗಿಸುವ ವ್ಯವಸ್ಥೆ ಮಾಡಿದ. ಅಗ್ನಿಗಾಹುತಿಯಾಗುವಾಗ ಬಳಿಯಲ್ಲೇ ನಿಂತಿದ್ದ. ಅರ್ಜುನನ ಮೇಲೆ ಯಾವುದೋ ಚೈತನ್ಯದ ಆವಾಹನೆಯಾದಂತಿತ್ತು. ಅಗ್ನಿಸಂಸ್ಕಾರದ ಭೀಕರ ದಿನ ಕಳೆಯಿತು. ರಾತ್ರಿಯನ್ನೆಲ್ಲ ಕೃಷ್ಣಧ್ಯಾನದಲ್ಲಿ ಕಳೆದ. ಬೇರೇನೂ ಅವನ ಮನಸ್ಸಿನಲ್ಲಿ ಸುಳಿಯಲಿಲ್ಲ. ಬೆಳಗಾಗುವ ಹೊತ್ತಿಗೆ ವಸುದೇವನು ಯೋಗದಿಂದ ದೇಹತ್ಯಾಗ ಮಾಡಿಬಿಟ್ಟಿದ್ದ. ಅರ್ಜುನನ ಪ್ರೀತಿಗೆ ಪಾತ್ರವಾದ ಯಾವುದೂ ದ್ವಾರಕೆಯಲ್ಲಿ ಉಳಿದಿರಲಿಲ್ಲ. ಕೃಷ್ಣ ಬಲರಾಮರ ಎಷ್ಟೋ ಹೆಂಡಂದಿರು ಚಿತೆಯನ್ನೇರಿ ಪ್ರಾಣ ಬಿಟ್ಟಿದ್ದರು. ಕುಟುಂಬದ ಅಳಿದುಳಿದ ಹೆಂಗಸರು ಮಕ್ಕಳನ್ನೂ ಪುರಜನರನ್ನೂ ಹಸ್ತಿನಾವತಿಗೆ ಕರೆದೊಯ್ದು ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಈಗ ಅರ್ಜುನನ ಕರ್ತವ್ಯವಾಗಿತ್ತು. ದು:ಖೀ ಜನರ ಯಾತ್ರೆ ಅಲ್ಲಿಂದ ಹೊರಟಿತು. ಯಾರೊಬ್ಬರೂ ಇಲ್ಲದ ದ್ವಾರಕೆ ಈಗ ಬರಿದೋ ಬರಿದಾಯಿತು.

ಈವರೆಗೆ ಪ್ರಕೃತಿಸಹಜ ದಡಗಳಿಗೆ ಸಹಜವಾಗಿ

ಂದು ಬಡಿಯುತ್ತಿದ್ದ ಸಮುದ್ದದ ಅಲೆಗಳು ಈಗ ಇದ್ದಕ್ಕಿದ್ದಂತೆ ಎತ್ತರವಾಗಿ ರಭಸದಿಂದ ಬರತೊಡಗಿದವು. ನೋಡುತ್ತಿದ್ದಂತೆ ಸಮುದ್ರವು ನಗರದೊಳಕ್ಕೆ ನುಗ್ಗಿತು. ಬೀದಿಬೀದಿಗಳಲ್ಲೂ ಹರಿಯತೊಡಗಿತು. ಅರ್ಜುನನ ಕಣ್ಣೆದುರಿಗೇ ನಗರದ ಎಲ್ಲ ಕಟ್ಟಡಗಳೂ ಒಂದೊಂದಾಗಿ ನೀರಿನಲ್ಲಿ ಮುಳುಗಿದವು. ಕೊನೆಯದಾಗಿ ಅರ್ಜುನ ಕೃಷ್ಣನ ಅರಮನೆಯನ್ನು ನೋಡಿದ. ಅದೂ ಸಮುದ್ರದ ಪಾಲಾಯಿತು. ಕೆಲವೇ ಕ್ಷಣಗಳಲ್ಲಿ ಅಲ್ಲಿ ದ್ವಾರಕೆಯೆಂಬ ನಗರವಿತ್ತೆಂಬ ಯಾವ ಕುರುಹೂ ಉಳಿಯಲಿಲ್ಲ. ದ್ವಾರಕೆಯೆಂಬುದು ಕೇವಲ ಸ್ಮರಣೆಯಾಗಿ ಉಳಿಯಿತು.

ಎಲ್ಲರೂ ಹಸ್ತಿನಾಪುರದ ಕಡೆಗೆ ಪ್ರಯಾಣಮಾಡಿದರು. ರಾತ್ರಿ ಮರಗಳ ಕೆಳಗೆ ತಂಗುತ್ತ, ಹಗಲಿನಲ್ಲಿ ಪ್ರಯಾಣಮಾಡುತ್ತ ಸಾಗಿದರು. ಅರ್ಜುನನ ಬಾಳಿನ ಭೀಕರ ಅನುಭವ ಅದು. ಎಷ್ಟೆಂದು ತಡೆದುಕೊಳ್ಳುವುದು! ಸದ್ಯದಲ್ಲೇ ತನಗೆ ಹುಚ್ಚು ಹಿಡಿಯಬಹುದು ಎಂದೆನಿಸತೊಡಗಿತು. ಒಂದು ದಿನ ಕಾಡಿನಲ್ಲಿ ಪ್ರಯಾಣಮಾಡುತ್ತಿರುವಾಗ, ಈ ಗುಂಪನ್ನು ನೋಡಿದ ಕಳ್ಳರು ಇಷ್ಟು ಜನರಿಗೆ ಒಬ್ಬನೇ ರಕ್ಷಕನಿರುವುದನ್ನು ಗಮನಿಸಿ ಸಂಪತ್ತನ್ನೂ ಹೆಂಗಸರನ್ನೂ ದೋಚುವುದಕ್ಕಾಗಿ ಮೇಲೆ ಬಿದ್ದರು. ಅರ್ಜುನನು ತನ್ನ ಗಾಂಡೀವವನ್ನೆತ್ತಿಕೊಂಡು ಬೇಗನೆ ನಾಣೇರಿಸಲು ಪ್ರಯತ್ನಿಸಿದನು. ಅಷ್ಟೊಂದು ಸುಲಭವೂ ಸುಭಗವೂ ಆಗಿದ್ದ ಗಾಂಡೀವಕ್ಕೆ ಈಗ ನಾಣೇರಿಸುವುದರಲ್ಲಿ ಸಾಕೋಸಾಕಾಯಿತು. ಅರ್ಜುನನಿಗೆ ಬಹಳ ಆಶ್ಚರ್ಯವಾಯಿತು. ಮೊದಲಿನ ಕುಶಲತೆ ಈಗ ಬೆರಳುಗಳಲ್ಲಿ ಉಳಿದಿರಲಿಲ್ಲ. ಬಾಣಗಳನ್ನು ಬಿಡುವುದೂ ಪ್ರಯಾಸವೇ ಆಯಿತು. ಅಕ್ಷಯತೂಣೀರ ಈಗ ಬರಿದಾಗಿತ್ತು. ಯಾವುದಾದರೂ ಅಸ್ತ್ರವನ್ನು ಪ್ರಯೋಗಿಸಿ ಬೇಗ ಕಳ್ಳರನ್ನು ಓಡಿಸೋಣವೆಂದು ಪ್ರಯತ್ನಿಸಿದರೆ ಯಾವ ಅಸ್ತ್ರದ ಮಂತ್ರವೂ ನೆನಪಿಗೆ ಬರಲೊಲ್ಲದು. ಅರ್ಜುನ ನಿಸ್ಸಹಾಯಕನಾದನು. ಕಳ್ಳರು ಮನಸ್ಸು ಬಂದ ಹಾಗೆ ಸ್ತ್ರೀಯರನ್ನೂ ಸಂಪತ್ತನ್ನೂ ದೋಚಿಕೊಂಡು ಹೋದರು. ಭಗ್ನ ಹೃದಯಿಯಾದ ಅರ್ಜುನನು ಉಳಿದವರೊಡನೆ ಪ್ರಯಾಣ ಮುಂದುವರೆಸಿದನು. ಹಸ್ತಿನಾಪುರವನ್ನು ಸೇರಿ ಯುಧಿಷ್ಠಿರನ ಎದುರಿಗೆ ಹೋಗಿ ನಿಂತನು. ಸ್ವಲ್ಪ ಹೊತ್ತಿನಲ್ಲಿಯೇ ಎಚ್ಚರ ತಪ್ಪಿ ಅಲ್ಲಿಯೇ ಬಿದ್ದುಬಿಟ್ಟನು.

ಪರಿವಿಡಿ