ಪರಿವಿಡಿ

This book is available at Ramakrishna Ashrama, Mysore.

ಮಹಾಪ್ರಸ್ಥಾನಿಕಪರ್ವ

ಅರ್ಜುನನಿಗೆ ಕಳೆದ ಕೆಲವು ದಿನಗಳ ಮಾನಸಿಕ ಯಾತನೆಯ ಭಾರ ಅತಿಯಾಗಿತ್ತು. ಶೆ

ತ್ಯೋಪಚಾರ ಮಾಡಿ ಅವನನ್ನು ಎಚ್ಚರಗೊಳಿಸಿದರು. ದುಃ

ದ ರುದ್ರತಾಂಡವದಲ್ಲಿ ದೇಹವೆಲ್ಲ ಒಡೆದು ಹೋಗುತ್ತಿದೆಯೋ ಎಂಬಷ್ಟು ಯಾತನೆಯಿಂದ ಅಳುತ್ತ, ತಾನು ಕೃಷ್ಣ ಸಾತ್ಯಕಿ ಬಲರಾಮ ಮುಂತಾದವರ ಶರೀರಗಳಿಗೆಲ್ಲ ಹೇಗೆ ಅಗ್ನಿಸ್ಪರ್ಶ ಮಾಡಿಸಿದೆ ಎಂಬುದನ್ನು ಅವನು ವಿವರಿಸಿದ. ಸಮುದ್ರವು ಮೇಲೆದ್ದು ಬಂದು ದ್ವಾರಕೆಯನ್ನು ಮುಳುಗಿಸಿದ್ದನ್ನೂ ವರ್ಣಿಸಿದ. ಕಳ್ಳರು ತಮ್ಮ ಮೇಲೆ ಬಿದ್ದಾಗ ಗಾಂಡೀವವಿದ್ದೂ ತಾನು ಜನರನ್ನು ರಕ್ಷಿಸಲು ಹೇಗೆ ಅಸಮರ್ಥನಾದೆ ಎಂಬುದನ್ನೂ ಹೇಳಿಕೊಂಡ. ಪಾಂಡವರೆ

ವರೂ ಸುಮ್ಮನೆ ಕುಳಿತರು. ಕೃಷ್ಣನಿಗಾಗಿ ಮರುಗಿ ಕಣ್ಣೀರಿಟ್ಟರು. ಕಣ್ಣೀರೂ ಬರುತ್ತಿಲ್ಲ. ಕೃಷ್ಣನ ಸಾವಿನೊಂದಿಗೇ ತಮ್ಮಲ್ಲಿ ಇದ್ದ ಸಮಸ್ತ ಜೀವಂತಿಕೆಯೂ ಸುತ್ತುಹೋಗಿದೆ ಎಂದು ಅವರಿಗನ್ನಿಸಿತು. ಪ್ರಪಂಚದಲ್ಲಿ ಬದುಕಿರುವುದಕ್ಕೆ ಇನ್ನೇನು ತಾನೆ ಉಳಿದಿದೆ? ಕೃಷ್ಣನು ಹೋದ ಮೇಲೆ ಜೀವಿಸಿರುವುದರಲ್ಲಿ ಅರ್ಥವಿಲ್ಲ.ಪಾಂಡವರಿಗೆ ಯಾವುದರಲ್ಲಿಯೂ ಆಸಕ್ತಿ ಉಳಿಯದಾಯಿತು.

ಯುಧಿಷ್ಠಿರನು, “ಅರ್ಜುನ,ಕಾಲನ ಕಡಾಯಿಯಲ್ಲಿ ನಾವೆಲ್ಲ ಕರಗಿಹೋಗುತ್ತಿರುವೆವು ಅಲ್ಲವೆ? ಬದುಕಿರಲು ಈಗ ನಮಗೆ ಪ್ರಿಯವಾದದ್ದು ಯಾವುದೂ ಉಳಿದಿಲ್ಲ. ಕೃಷ್ಣನ ಸಾವಿನೊಂದಿಗೆ ನಮ್ಮ ಜೀವನಗಳೂ ಕೊನೆಗೊಳ್ಳುವುದೇ ವಿಹಿತ” ಎನ್ನಲು, ಅರ್ಜುನನು, “ಹೌದಣ್ಣ. ಕೊನೆಗೆ ಜಯಶೀಲನಾಗಿರುವುದು ಕಾಲನೇ”ಎಂದನು. ಉಳಿದವರೂ ತಲೆದೂಗಿದರು. ಈ ಭೂಮಿಯನ್ನು ತೊರೆಯುವ ಕೊನೆಯ ಪಯಣ ಹೊರಡುವುದೆಂದು ಪಾಂಡವರು ನಿರ್ಧರಿಸಿದರು. ಯುಧಿಷ್ಠಿರನು ಎಲ್ಲ ಏರ್ಪಾಡುಗಳನ್ನೂ ಮಾಡಿದನು. ಪರೀಕ್ಷಿತ್ತಿಗೆ ಪಟ್ಟಾಭಿಷೇಕ ಮಾಡಿಸಿ ಕಿರೀಟವನ್ನಿಟ್ಟನು. ಅವನ ರಕ್ಷಣೆಗೆಂದು ಯಯುತ್ಸುವನ್ನೂ, ಗುರುವಾಗಿ ಕೃಪನನ್ನೂ ನೇಮಕ ಮಾಡಿದನು. ತಾವು ಇನ್ನು ಎಲ್ಲವನ್ನೂ ತ್ಯಾಗಮಾಡಿ ಸ್ವರ್ಗಾಭಿಮುಖವಾಗಿ ಹೊರಡುತ್ತೇವೆ ಎಂದು ಪುರಜನರಿಗೆಲ್ಲ ಡಂಗುರ ಹೊಡೆಸಿ ತಿಳಿದನು. ಯಾರೂ ಅವರನ್ನು ತಡೆಯಲಾಗಲಿಲ್ಲ.

ಪಾಂಡವರು ಮಹಾಪ್ರಸ್ಥಾನಕ್ಕೆ ಸಿದ್ಧರಾದರು. ಮರಗಳ ತೊಗಟೆಯನ್ನುಟ್ಟು ಕೃಷ್ಣಾಜಿನವನ್ನು ಹೊದ್ದು ಅವರು ಅರಮನೆಯ ಮಹಾದ್ವಾರದಿಂದ ಹೊರಗೆ ಬಂದರು. ಆಭರಣಗಳನ್ನೆಲ್ಲ ತ್ಯಜಿಸಿ ಮರಗಳ ತೊಗಟೆಯನ್ನುಟ್ಟ ದ್ರೌಪದಿಯು ಪಕ್ಕದಲ್ಲಿದ್ದಳು. ಇಡೀ ನಗರವೇ ಶೋಕಾಕುಲವಾಯಿತು. ವರ್ಷಗಳ ಹಿಂದೆ ವನವಾಸಕ್ಕೆ ಹೊರಟಾಗಲೂ ಪಾಂಡವರು ಹೀಗೆಯೇ ಕಾಣುತ್ತಿದ್ದರಾದರೂ, ಈಗ ಅವರ



ದಯದಲ್ಲಿ ಪರಮಶಾಂತಿ ನೆಲೆಸಿರುವುದನ್ನು ಅವರ ಮುಖದ ಅಪ್ರತಿಮ ಕಾಂತಿಯು ತೋರಿಸುತ್ತಿತ್ತು. ಪಾಂಡವರು ಹಸ್ತಿನಾಪುರಕ್ಕೆ ವಿದಾಯ ಹೇಳಿ



ಢಮನಸ್ಸಿನಿಂದ ಹೆಜ್ಜೆ ಹಾಕುತ್ತ ಹೊರಟುಹೋದರು.

ಮೊದಲು ಅವರು ದ್ವಾರಕೆಯ ಕಡೆಗೆ ನಡೆದರು. ನಗರವು ನೀರಿನಲ್ಲಿ ಮುಳುಗಿರುವುದನ್ನು ನೋಡಿದರು. ಸಮುದ್ರಕಿನಾರೆಯಲ್ಲಿ ಧೇನಿಸುತ್ತ ನಿಂತರು. ಹಳೆಯ ನೆನಪುಗಳು ದೀರ್ಘಕಾಲದ ಕನಸುಗಳು ಅವರನ್ನು ಕಾಡಿದವು. ಆಗ ಅಗ್ನಿಯು ಅವರ ಮುಂದೆ ಪ್ರತ್ಯಕ್ಷನಾಗಿ, “ಅರ್ಜುನ ಗಾಂಡೀವ ಹಾಗೂ ಅಕ್ಷಯತೂಣೀರಗಳು ಇನ್ನೂ ನಿನ್ನ ಬಳಿಯೇ ಇವೆ. ನಾನು ಅವನ್ನು ನಿನಗಾಗಿ ವರುಣನಿಂದ ಪಡೆದಿದ್ದೆ. ಅವುಗಳ ಉದ್ದೇಶ ಪೂರ್ಣವಾಯಿತಲ್ಲವೆ? ನಿನಗೆ ಅವು ಇನ್ನು ಬೇಕಾಗುವುದಿಲ್ಲ. ಅವನ್ನು ವರುಣನಿಗೆ ಹಿಂದಿರುಗಿಸಿಬಿಡು” ಎಂದನು. ಅರ್ಜುನನ ಹೃದಯ ಒಡೆಯುವಂತಾಯಿತು. ಆದರೂ ಸಮತ್ವವನ್ನು ಕಾಪಾಡಿಕೊಂಡು, ಗಾಂಡೀವ ಮತ್ತು ಅಕ್ಷಯತೂಣೀರಗಳಿಗೆ ಕಣ್ಣೀರಿಡುತ್ತ ಕೊನೆಯದಾಗಿ ನಮಸ್ಕರಿಸಿ, ಅವುಗಳನ್ನು ಸಮುದ್ರಕ್ಕೆ ಎಸೆದುಬಿಟ್ಟನು.

ಅಲ್ಲಿಂದ ಪಾಂಡವರು ಉತ್ತರಕ್ಕೆ ಪ್ರಯಾಣ ಮಾಡಿ ಹಿಮವತ್ಪರ್ವತವನ್ನು ತಲುಪಿದರು. ಮೇರು ಪರ್ವತದ ಬಳಿಗೆ ಬಂದಾಗ, ದ್ರೌಪದಿಯು ಇದ್ದಕ್ಕಿದ್ದಂತೆ ಬಿದ್ದುಬಿಟ್ಟಳು. ಭೀಮನಿಗೆ ತುಂಬ ಅಘಾತವಾಯಿತು. ಆದರೂ ಸಾವರಿಸಿಕೊಂಡು, ನಿರಪರಾಧಿಯಾದ ದ್ರೌಪದಿಯು ಬಿದ್ದುದೇಕೆ ಎಂದು ಯುಧಿಷ್ಠಿರನನ್ನು ಕೇಳಿದನು. ಯುಧಿಷ್ಠಿರನು, “ಭೀಮ, ನಾವೆಲ್ಲರೂ ಪತಿಗಳಾದಾಗ್ಯೂ ಅವಳಿಗೆ ಅರ್ಜುನನ ಮೇಲೆ ವಿಶೇಷ ಪ್ರೀತಿಯಿತ್ತು. ಉಳಿದಂತೆ ಅವಳು ಪರಮಶುದ್ಧಳು; ಅದರಿಂದಾಗಿಯೇ ಅವಳಿಗೆ ಇಲ್ಲಿಯವರೆಗೆ ಬರಲು ಸಾಧ್ಯವಾಯಿತು” ಎಂದನು. ಅವಳನ್ನು ಅಲ್ಲಿಯೇ ಬಿಟ್ಟು ಅವರು ಮುಂದುವರೆದರು. ಸ್ವಲ್ಪ ದೂರ ಹೋಗುವುದರೊಳಗೆ ಸಹದೇವನು ಬಿದ್ದುಬಿಟ್ಟನು. ಯುಧಿಷ್ಠಿರನನು, ಸಹದೇವನಿಗೆ ತಾನೇ ವಿವೇಕಿ ಎಂಬ ಭಾವನೆಯಿದ್ದಿತು, ಅದೇ ಅವನು ಬೀಳಲು ಕಾರಣ ಎಂದು ವಿವರಿಸಿದನು. ಅನಂತರ ಬಿದ್ದವನು ನಕುಲ. ಯುಧಿಷ್ಠಿರನು, ನಕುಲನಿಗೆ ತಾನೇ ಸುಂದರಾಂಗ ಎಂಬ ಹೆಮ್ಮೆಯಿದ್ದಿತು, ಅದು ಅವನು ಬೀಳುವುದಕ್ಕೆ ಕಾರಣ ಎಂದನು. ಅನಂತರ ಅರ್ಜುನನ ಸರದಿ. ಎಲ್ಲ ಶತ್ರುಗಳನ್ನೂ ತಾನೊಬ್ಬನೇ ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿದ್ದು, ಉಳಿದ ವೀರರನ್ನೆಲ್ಲ ಅವಮಾನಿಸಿದುದರಿಂದ ಅವನು ಬಿದ್ದನು ಎಂದನು ಯುಧಿಷ್ಠಿರ. ಸ್ವಲ್ಪ ದೂರ ಹೋಗುವುದರೊಳಗಾಗಿ ಸ್ವಯಂ ಭೀಮನೇ ಬಿದ್ದುಬಿಟ್ಟನು. “ನಾನೂ ಬಿದ್ದುಹೋಗುತ್ತಿದ್ದೇನೆ. ಅಣ್ಣಾ, ನಾನು ಮಾಡಿದ ಅಪರಾಧವೇನು?” ಎಂದು ಕೂಗಿ ಕೇಳಲು, ಯುಧಿಷ್ಠಿರನನು “ಪ್ರಿಯ ಭೀಮ, ನೀನು ಯಾವಾಗಲೂ ನನಗೆ ತುಂಬ ಪ್ರೀತಿಪಾತ್ರ. ನೀನು ಯಾವಾಗಲೂ ನಿನ್ನ ಬಲವನ್ನು ಕುರಿತು ಹೆಮ್ಮಪಡುತ್ತಿದ್ದೆ. ಅಲ್ಲದೆ ಹೆಚ್ಚಾಗಿ ಆಹಾರ ಸೇವಿಸುತ್ತಿದ್ದೆ. ಇದನ್ನು ಬಿಟ್ಟರೆ ನಿನ್ನಂಥವರು ಲೋಕದಲ್ಲಿ ಯಾರೂ ಇಲ್ಲ” ಎಂದು ಉತ್ತರಿಸಿದ ಯುಧಿಷ್ಠಿರನು, ಶಾಂತಿಯನ್ನರಸಿಕೊಂಡು ತಾನೊಬ್ಬನೇ ಮುನ್ನಡೆದನು.

ಅವರು ಹಸ್ತಿನಾವತಿಯನ್ನು ಬಿಟ್ಟಾಗಿನಿಂದ ಒಂದು ನಾಯಿಯು ಅವರನ್ನು ಅನುಸರಿಸಿಕೊಂಡೇ ಬರುತ್ತಿದ್ದಿತು. ಯುಧಿಷ್ಠಿರನನು ರಾಣಿ ದ್ರೌಪದಿಯು ಬಿದ್ದು ಹೋದಳು; ಅವನ ಸಹೋದರರೆಲ್ಲರೂ ಬಿದ್ದುಹೋದರು; ಆದರೆ ಈ ನಾಯಿ ಮಾತ್ರ ಅವನನ್ನು ಕೊನೆಯವರೆಗೂ ಅನುಸರಿಸಿಕೊಂಡೇ ನಡೆಯಿತು. ಯುಧಿಷ್ಠಿರನು ತನ್ನ ಸುತ್ತಲೂ ಒಂದು ಅಲೌಕಿಕ ಪ್ರಭೆ ಮೂಡಿರುವುದನ್ನು ಗಮನಿಸಿದನು. ನೋಡಿದರೆ ತನ್ನ ರಥದಲ್ಲಿ ಬಂದಿಳಿದ ದೇವೇಂದ್ರ. ಅವನು, “ಯುಧಿಷ್ಠಿರ, ನಿನ್ನನ್ನು ಸ್ವರ್ಗಕ್ಕೆ ಕರೆದೊಯ್ಯಲು ಸ್ವಯಂ ನಾನೇ ಬಂದಿರುವೆ. ಬಾ ರಥವೇರಿ ಕುಳಿತುಕೋ” ಎಂದು ಆಹ್ವಾನಿಸಿದನು. ಯುಧಿಷ್ಠಿರನನಿಗೆ ದ್ರೌಪದಿಯನ್ನೂ ತನ್ನ ತಮ್ಮಂದಿರನ್ನೂ ಬಿಟ್ಟು ಸ್ವರ್ಗಕ್ಕೆ ಹೋಗಲು ಇಷ್ಟವಿರಲಿಲ್ಲ. “ದ್ರೌಪದಿಯು ನನ್ನ ತಮ್ಮಂದಿರೂ ನನ್ನ ಜೊತೆಗೇ ಇಲ್ಲಿಯವರೆಗೂ ಬಂದರು. ಅವರೆಲ್ಲ ಬಿದ್ದುಹೋಗಿರುವರು, ದೇಹ ತ್ಯಾಗ ಮಾಡಿರುವರು. ಅವರು ಎಲ್ಲಿಗೆ ಹೋಗಿರುವರೋ ತಿಳಿಯದು. ಅವರ ಜೊತೆಗಲ್ಲದೆ ನಾನು ಸ್ವರ್ಗಕ್ಕೆ ಬರುವುದಿಲ್ಲ” ಎನ್ನಲು, ಇಂದ್ರನು ನಕ್ಕು “ಯುಧಿಷ್ಠಿರ, ಅವರು ಈಗಾಗಲೇ ಮನುಷ್ಯಶರೀರವನ್ನು ತೊರೆದು ಸ್ವರ್ಗವನ್ನು ಸೇರಿದ್ದಾರೆ. ನಿನಗೊಬ್ಬನಿಗೆ ಮಾತ್ರವೇ ಸಶರೀರನಾಗಿ ಸ್ವರ್ಗಕ್ಕೆ ಬರುವ ಅವಕಾಶ” ಎಂದನು. ಯುಧಿಷ್ಠಿರನನು, “ನನಗೆ ಸಂದ ಮರ್ಯಾದೆಗಾಗಿ ನಾನು



ತಜ್ಞ. ದೇವೇಂದ್ರ, ಅವರೆಲ್ಲರೂ ಅಲ್ಲಿರುವರೆಂದ ಮೇಲೆ ನಾನು ಬರಲು ಸಿದ್ಧ. ಆದರೆ ಈ ನಾಯಿಯೂ ನನ್ನ ಜೊತೆಗೆ ಬರಲಿ. ಅದು ಹಸ್ತಿನಾವತಿಯಿಂದಲೂ ನಮ್ಮ ಜೊತೆಗೆ ಬಂದಿದೆ. ನಾನಿದನ್ನು ಕರೆತರುತ್ತೇನೆ” ಎನ್ನಲು ದೇವೇಂದ್ರನು ಇವನ ನಾಯಿಯ ಮೇಲಿನ ಮೂರ್ಖ ಪ್ರೇಮವನ್ನು ಕಂಡು ನಕ್ಕು, “ಯುಧಿಷ್ಠಿರ, ನಿನಗೆ ಚಿರಂಜೀವಿ ಪಟ್ಟ ಸಿಕ್ಕಿದೆ. ನೀನೀಗ ನನಗೆ ಸಮಾನ; ಬಹು ಅ



ಷ್ಟಶಾಲಿ. ನಿನ್ನ ಶ್ವಾನಪ್ರೇಮದಿಂದ ಇದೆಲ್ಲವನ್ನೂ ಕಳೆದುಕೊಳ್ಳಬೇಡ. ಸ್ವರ್ಗದಲ್ಲಿ ನಾಯಿಗೆ ಸ್ಥಳವಿಲ್ಲ. ದಯವಿಟ್ಟು ಅದನ್ನು ತ್ಯಜಿಸಿ ಬಾ” ಎಂದನು. ಯುಧಿಷ್ಠಿರನನು ತಲೆಯಲ್ಲಾಡಿಸಿ, “ದೇವ ನನಗೆ ಅಸಾಧ್ಯವಾದುದನ್ನು ಮಾಡೆಂದು ಹೇಳುತ್ತಿದ್ದಿಯೆ. ಈ ನಾಯಿ ಈವರೆಗೂ ನಮ್ಮೊಡನಿದ್ದು ನಮ್ಮ ಕಷ್ಟಗಳನ್ನೆಲ್ಲ ಹಂಚಿಕೊಂಡಿದೆ. ನನ್ನೊಡನೆ ಬಹು ಸ್ನೇಹದಿಂದಿದೆ. ಇದನ್ನು ನಾನು ಬಿಟ್ಟು ಬರಲಾರೆ” ಎನ್ನಲು, ಇಂದ್ರನು, “ಮೂರ್ಖತನ ಮಾಡಬೇಡ. ಸ್ವರ್ಗದ ಹೊಸ್ತಿಲಿನ ಬಳಿ ಬಂದಿರುವ ನೀನು ಮಾನವ ಸಹಜ ಭಾವನೆಗಳಿಂದ ಬಾಧೆಪಡುತ್ತಿರುವೆ. ನನ್ನ ರಥದಲ್ಲಿ ನಾನಿದನ್ನು ಕೂರಿಸಿಕೊಳ್ಳಲಾರೆ” ಎಂದನು. ಆಗ ಯುಧಿಷ್ಠಿರನನು, “ನಾನೀಗ ಈ ನಾಯಿಗೆ ದಯೆ ತೋರಿಸದಿದ್ದರೆ, ಸ್ವರ್ಗವನ್ನು ಗಳಿಸಲು ಕಾರಣವಾದ ನನ್ನೆಲ್ಲ ಪುಣ್ಯಾರ್ಜನೆಯೂ ಖಿಲವಾಗುವುದು. ಆಶ್ರಿತರನ್ನು ನಾನು ಎಂಥ ಸಂದರ್ಭದಲ್ಲಿಯೂ ಕೈ ಬಿಡುವುದಿಲ್ಲ” ಎನ್ನಲು, ಇಂದ್ರನು, “ನೀನು ನಿನ್ನ ಸೋದರರನ್ನೂ ದ್ರೌಪದಿಯನ್ನೂ ಬಿಟ್ಟು ಬಂದಿಲ್ಲವೆ? ಈ ನಾಯಿ ಅವರಿಂಗಿಂತ ಹೆಚ್ಚೇ ನಿನಗೆ?” ಎಂದನು. ಅದಕ್ಕೆ ಯುಧಿಷ್ಠಿರನನು, “ಅವರೆಲ್ಲ ಸತ್ತುಬಿದ್ದರು. ನಾನು ಅವರನ್ನು ಬದುಕಿಸಲಾರದಾದೆ. ಅವರು ಬದುಕಿದ್ದಿದ್ದರೆ ನಾನು ಅವರನ್ನು ಬಿಟ್ಟು ಬರುತ್ತಿರಲಿಲ್ಲ. ಆದರೆ ಈ ನಾಯಿ ಬದುಕಿದೆ. ಇದನ್ನು ಬಿಡಲಾರೆ. ನಾಯಿಗೆ ಸ್ಥಾನವಿಲ್ಲದಿರುವ ಸ್ವರ್ಗ ನನಗೂ ಬೇಡ” ಎಂದುಬಿಟ್ಟನು. ಈಗ ನಾಯಿಯ ರೂಪವನ್ನು ತ್ಯಜಿಸಿ ಧರ್ಮನು ಪ್ರತ್ಯಕ್ಷನಾದನು. “ಮಗನೇ, ನಿನ್ನ ಬಗ್ಗೆ ನನಗೆ ಹೆಮ್ಮೆಯುಂಟಾಗಿದೆ. ನಿನ್ನ ಜೀವಕಾರುಣ್ಯ ನನ್ನ ಹೃದಯವನ್ನು ಗೆದ್ದಿದೆ. ಹಿಂದೊಮ್ಮೆ ದ್ವೈತವನದಲ್ಲಿ ಸರಸ್ಸೊಂದರ ಬಳಿ ನಿನ್ನ ತಮ್ಮಂದಿರೆಲ್ಲ ಸತ್ತು ಮಲಗಿದ್ದಾಗ ನಾನು ನಿನ್ನನ್ನು ಪರೀಕ್ಷಿಸಿದೆ. ಒಬ್ಬ ಸೋದರನನ್ನು ಬದುಕಿಸುತ್ತೇನೆ, ಯಾರು ಬೇಕು ಎಂದು ಕೇಳಿದಾಗ ನೀನು ನಕುಲನು ಬದುಕಬೇಕೆಂದೆ. ಈಗ ಪುನಃ ನಿನ್ನನ್ನು ನಾನು ಪರೀಕ್ಷಿಸಿದೆ. ನಿನ್ನ ದಯಾಶೀಲತೆಯಿಂದ ನನಗೆ ಸಂತೋಷವಾಗಿದೆ. ಇಂದ್ರನ ಜೊತೆಗೆ ಸ್ವರ್ಗಕ್ಕೆ ಹೋಗು”ಎಂದನು. ಅಷ್ಟರಲ್ಲಿ ಮಾನವಶರೀರ ಸಮೇತನಾಗಿ ಸ್ವರ್ಗಕ್ಕೆ ಬರುತ್ತಿರುವ ಈ ಮಹಾನುಭಾವನನ್ನು ನೋಡುವುದಕ್ಕೆಂದು ಸ್ವರ್ಗವಾಸಿಗಳನೇಕರು ಅಲ್ಲಿ ಬಂದು ನೆರೆದರು. ನಾರದನು, “ಯುಧಿಷ್ಠಿರ, ಈ ಹಿಂದೆ ರಾಜ್ಯವಾಳಿದ ಕುರುವಂಶದ ಮಹಾರಾಜರುಗಳನೇಕರ ಜೊತೆಗೆ ನೀನೀಗ ಸಂತೋಷವಾಗಿರಬಹುದು” ಎನ್ನಲು, ಯುಧಿಷ್ಠಿರನು “ಹಾಗೇಯೇ ಆಗಲಿ. ನಾನು ಧನ್ಯ” ಎಂದು ಹೇಳಿ ಇಂದ್ರನೊಂದಿಗೆ ಅವನ ರಥದಲ್ಲಿ ಕುಳಿತನು.

ರಥವು ಅಂತರಿಕ್ಷಕ್ಕೇರಿ ಆಕಾಶದಲ್ಲಿ ಹಾರತೊಡಗಿತು. ಅಮರಾವತಿಯೆಂಬ ನಗರವನ್ನು ಅವರು ತಲುಪಿದರು. ಯುಧಿಷ್ಠಿರನನ್ನು ಸಭೆಗೆ ಕರೆದೊಯ್ಯಲಾಯಿತು. ನಾರದನು, “ನಿನ್ನ ಹಿರಿಯರಾದ ಈ ರಾಜರುಗಳನ್ನು ನೋಡು. ಅವರು ತಮ್ಮ ಸತ್ಕಾರ್ಯಗಳಿಂದ, ಸತ್ಕೀರ್ತಿಯ ಪರಿಮಳದಿಂದ ಕಾಲನನ್ನೂ ಪೂಸಿದವರು. ಈಗ ನೀನೂ ಅವರಲ್ಲೊಬ್ಬನಾಗಿರುವೆ” ಎಂದನು. ಯುಧಿಷ್ಠಿರನು ಅಲ್ಲಿದ್ದವರನ್ನೆಲ್ಲ ನೋಡಿ, “ಇಲ್ಲಿ ನನ್ನ ಸಹೋದರರು ಕಾಣುತ್ತಿಲ್ಲ. ನನ್ನ ರಾಣಿ ದ್ರೌಪದಿ ಕಾಣಿಸುತ್ತಿಲ್ಲ. ಅವರುಗಳು ಎಲ್ಲಿರುವರೋ ಅಲ್ಲಿಗೆ ನಾನು ಹೋಗಬಯಸುತ್ತೇನೆ. ನನಗೆ ಇನ್ನಾವ ಲೋಕವೂ ಬೇಡ. ನನ್ನ ಸೋದರರಿದ್ದಲ್ಲಿಗೆ ನನ್ನನ್ನು ಕೊಂಡೊಯ್ಯಿರಿ!” ಎಂದನು. ಈ ಮಾತನ್ನು ಕೇಳಿದ ಇಂದ್ರನು, “ಯುಧಿಷ್ಠಿರ, ಭೂಮಿಯನ್ನಾಳಿದವರಲ್ಲಿ ಅತ್ಯಂತ ಹೆಚ್ಚು ಋಜುತ್ವವುಳ್ಳ ರಾಜನೆಂಬುದಕ್ಕಾಗಿ ಈ ಮಹಾಸಭೆಯಲ್ಲಿ ನೀನು ಸ್ಥಾವನ್ನು ಗಳಿಸಿಕೊಂಡಿರುವೆ. ನೀನು ಇಲ್ಲಿ ನೆಲೆಸಿರಬೇಕು. ಭೂಮಿಯ ಭಾವಗಳೂ ಸಂಬಂಧಗಳೂ ನಿನ್ನನ್ನು ಸೆಳೆಯುವುದಕ್ಕೆ ಏಕೆ ಅವಕಾಶ ಕೊಡುತ್ತೀ? ನೀನೇನೂ ಈಗ ಭೂಮಿಯ ಮೇಲಿಲ್ಲ; ಸ್ವರ್ಗದಲ್ಲಿ ಇರುವೆ. ಸೋದರರ ಮೇಲಿನ ಈ ಮೂರ್ಖ ಪ್ರೇಮವನ್ನು ಬಿಟ್ಟು ಇಲ್ಲಿಯೇ ಸುಖವಾಗಿರು” ಎಂದನು. ಅವನು ಹಾಗೆನ್ನುತ್ತಿರುವಾಗಲೂ ಯುಧಿಷ್ಠಿರನ ಕಾತರದ ಕಣ್ಣುಗಳು ತನ್ನವರನ್ನೇ ಹುಡುಕುತ್ತಿದ್ದವು. ದ್ರೌಪದಿಯಾಗಲಿ ಅವನ ಸೋದರರಾಗಲಿ ಅಲ್ಲಿರಲಿಲ್ಲ.

ಯುಧಿಷ್ಠಿರನು ಇಂದ್ರನನ್ನು ಕಂಡು “ದೇವರಾಜ, ನೀನು ನನಗಿತ್ತ ಸ್ಥಾಮಾನಗಳಿಗೆ ನಾನು



ತಜ್ಞ. ಆದರೆ ನನ್ನ ಸೋದರರು ಇಲ್ಲದ ಈ ಸ್ಥಳದಲ್ಲಿ ನಾನು ಕ್ಷಣಮಾತ್ರವೂ ಇರಲಾರೆ. ಅವರಿಲ್ಲದ ಸ್ವರ್ಗ ನನಗೆ ನರಕಕ್ಕೆ ಸಮಾನ; ನನಗಿದು ಬೇಡ.



ಷ್ಣೆಯಾದ ದ್ರೌಪದಿಯೂ ನನ್ನ ಪ್ರೀತಿಯ ಭೀಮಾರ್ಜುನರೂ ನಕುಲಸಹದೇವರೂ ಇರುವ ಜಾಗಕ್ಕೆ ದಯವಿಟ್ಟು ನನ್ನನ್ನು ಕಳುಹಿಸಿಬಿಡು. ನನಗೆ ಇನ್ನೇನೂ ಬೇಡ” ಎಂದನು. ಎಲ್ಲರೂ ಅವನನ್ನೇ ನೋಡುತ್ತಿದ್ದರು. ಅವನೂ ಮತ್ತೊಮ್ಮೆ ಸುತ್ತಲೂ ನೋಡುವಾಗ, ಅಲ್ಲಿ ದುರ್ಯೋಧನನಿದ್ದನು!

ಪರಿವಿಡಿ