ಪರಿವಿಡಿ

This book is available at Ramakrishna Ashrama, Mysore.

ಸ್ವರ್ಗಾರೋಹಣಪರ್ವ

ಜೀವನದುದ್ದಕ್ಕೂ ಅಷ್ಟೆಲ್ಲ ಕಷ್ಟಪಟ್ಟು ಯುಧಿಷ್ಠಿರನು ಗಳಿಸಿಕೊಂಡಿದ್ದ ಸ್ವರ್ಗದಲ್ಲಿ ದುರ್ಯೋಧನನು ಬಂದು ರತ್ನಭೂಷಿತ ಅಗ್ರಾಸನವೊಂದರ ಮೇಲೆ ವೈಭವೋಪೇತವಾಗಿ ಇತರ ರಾಜರುಗಳ ನಡುವೆ ಕುಳಿತಿದ್ದನು! ಯುಧಿಷ್ಠಿರನಿಗೆ ಬಹಳ ಆಶ್ಚರ್ಯವಾಯಿತು. “ಈ ದುರ್ಯೋಧನನನ್ನು ಇಲ್ಲಿ ನೋಡಿ ನಾನು ಸಹಿಸಲಾರೆ. ಇವನು ಭೂಮಿಯ ಅನೇಕಾನೇಕ ರಾಜರುಗಳ ಸಾವಿಗೆ ಕಾರಣನಾಗಿದ್ದವನು. ಪರಮ ಪಾಪಿ. ಇವನನ್ನು ನೋಡಲು ನನಗೆ ಇಷ್ಟವಾಗುತ್ತಿಲ್ಲ. ಇವನ ಜೊತೆಗೆ ನಾನು ಈ ಸ್ವರ್ಗದಲ್ಲಿರಲಾರೆ. ದೇವತೆಗಳೇ, ದಯವಿಟ್ಟು ನನ್ನನ್ನು ಇಲ್ಲಿಂದ ನನ್ನ ಸೋದರರ ಹತ್ತಿರಕ್ಕೆ ಕರೆದೊಯ್ಯಿರಿ. ನಾನಿಲ್ಲಿ ಇನ್ನೊಂದು ಕ್ಷಣವು ಇರಲಾರೆ” ಎಂದನು. ಇದನ್ನು ಕೇಳಿದ ನಾರದನು ನಕ್ಕು, “ಯುಧಿಷ್ಠಿರ, ನಿನ್ನ ದಾಯಾದಿ ದುರ್ಯೋಧನ ಇಲ್ಲಿಗೆ ಹೇಗೆ ಬಂದನೆಂದು ಹೇಳುವೆನು ಕೇಳು. ಅವನು ಇಲ್ಲಿರುವ ರಾಜರುಗಳಿಗೆ ಪ್ರಿಯವಾದವನು. ವೀರಾವೇಶದಿಂದ ಯುದ್ಧಮಾಡುತ್ತ ಸತ್ತದ್ದರಿಂದ ಅವನ ಆತ್ಮವು ಶುದ್ಧಿಯಾಗಿ ಅವನಿಗೆ ಸ್ವರ್ಗ ಪ್ರಾಪ್ತಿಯಾಗಿದೆ. ಅವನು ನಿನ್ನಂತಹ ಸತ್ಪುರುಷರನ್ನು ಅನೇಕ ಕಾಲ ಹಿಂಸಿಸಿದ್ದವನು. ಅನೇಕರ ಸಾವಿಗೆ ಕಾರಣನಾಗಿದ್ದವನು. ಅದೆಲ್ಲ ನಿಜ. ಆದರೆ ಅವನು ಕ್ಷತ್ರಿಯನಾಗಿ ಹುಟ್ಟಿ, ಭಯವೇನೆಂಬುದನ್ನೇ ಅರಿಯದೇ, ಕ್ಷತ್ರಿಯನಂತೆ ಸತ್ತನು. ನ್ಯಾಯವಾದ ರೀತಿಯಿಂದ ರಾಜ್ಯವಾಳಿದನು. ಮಾನವನಂತೆ ನೀನು ಅವನನ್ನು ಕಾಣಬಾರದು. ಸ್ವರ್ಗದಲ್ಲಿರುವ ನಿಯಮಗಳೂ ಭೂಮಿಯಲ್ಲಿರುವ ನಿಯಮಗಳೂ ಬೇರೆ ಬೇರೆ. ಯುದ್ಧಮಾಡುತ್ತ ಸತ್ತ ಕ್ಷತ್ರಿಯನ ಎಲ್ಲ ಪಾಪಗಳೂ ಕ್ಷಮಾರ್ಹವೆನ್ನುತ್ತಾರೆ. ಅಲ್ಲದೆ ಅವನು ಸ್ಯಮಂತಪಂಚಕವೆಂಬ ಪವಿತ್ರ ಸ್ಥಳದಲ್ಲಿ ಪ್ರಾಣ ಬಿಟ್ಟವನು. ಅವನನ್ನು ಸ್ವರ್ಗಕ್ಕೆ ಕಳುಹಿಸಿದವನು ಬಲರಾಮ. ಗಾಂಧಾರಿಯ ತಪಸ್ಸೂ ಇದಕ್ಕೆ ನೆರವಾಯಿತು. ನೀನು ದುರ್ಯೋಧನನ ಮೇಲಿರುವ ನಿನ್ನ ಸಿಟ್ಟನ್ನು ಮರೆತುಬಿಡು. ಇದು ಸ್ವರ್ಗ, ಯುಧಿಷ್ಠಿರ. ಇಲ್ಲಿ ದ್ವೇಷಭಾವನೆಗೆ ಅವಕಾಶವೇ ಇಲ್ಲ” ಎಂದನು.

ಯುಧಿಷ್ಠಿರನು ಸುಮ್ಮನೆ ಇದನ್ನೆಲ್ಲ ಕೇಳಿಸಿಕೊಂಡನು. ಸೋದರರನ್ನು ನೋಡುವ ಕಾತರದಿಂದ ಕುದಿಯುತ್ತಿದ್ದ ಅವನು, “ದೇವರ್ಷಿ, ನಾಣು ಸ್ವರ್ಗಕ್ಕೆ ಹೊಸಬ. ಇಲ್ಲಿಯ ನಿಯಮಗಳು ನನಗೆ ತಿಳಿಯವು. ನಾನಿನ್ನೂ ಭೂಮಿಯಿಂದ ಬಂದ, ಅಲ್ಲಿಯ ಶರೀರದಲ್ಲಿ ವಾಸಿಸುತ್ತಿರುವ, ಒಬ್ಬ ಕೇವಲ ಮನುಷ್ಯ. ನಾನು ನನ್ನ ಸೋದರರೆಲ್ಲಿರುವರೋ ಎಂಬ ಆತಂಕದಿಂದ ಒದ್ದಾಡುತ್ತಿದ್ದೇನೆ. ಈ ಪಾಪಿ ದುರ್ಯೋಧನನಿಗೇ ಇಂತಹ ಸ್ವರ್ಗ ಎನ್ನುವುದಾದರೆ, ನನ್ನ ಸಹೋದರರೆಲ್ಲಿ? ಅವರಾರೂ ಯಾವಾಗಲೂ ಋಜುಪಥವನ್ನು ತಪ್ಪಿ ನಡೆದಿಲ್ಲ, ಕರ್ತವ್ಯಭ್ರಷ್ಟರಾಗಿಲ್ಲ. ಅವರು ಮಹಾ ಪುರುಷರು, ಮಹಾ ವೀರರು ಅವರಿಗೆ ದೊರಕಿರುವ ಸ್ಥಳವನ್ನು ನಾನು ನೋಡಲಪೇಕ್ಷಿಸುತ್ತೇನೆ. ನನ್ನ ಅಣ್ಣ ರಾಧೇಯನೆಲ್ಲಿರುವನೆಂದು ಹೇಳಿರಿ. ಸಾತ್ಯಕಿ





ಷ್ಟದ್ಯುಮ್ನರೆಲ್ಲಿರುವರೆಂದು ತೋರಿಸಿರಿ. ಅವರನ್ನೆಲ್ಲರನ್ನೂ ನಾನು ನೋಡಬೇಕು. ನನ್ನ ಮಗು ಅಭಿಮನ್ಯು ಎಲ್ಲಿರುವನು? ಅವನೂ ಯುದ್ಧದಲ್ಲಿ ಹೋರಾಡುತ್ತಲೇ ಸತ್ತನಲ್ಲವೆ? ನನ್ನ ಜೀವದ ಜೀವವಾದ



ಷ್ಣನೆಲ್ಲಿ? ಅವರಿದ್ದಲ್ಲಿಗೆ ನನ್ನನ್ನು ಕರೆದೊಯ್ಯಿರಿ”ಎಂದನು.

ಯುಧಿಷ್ಠಿರನ ಧ್ವನಿ ಯಾತನೆಯಿಂದ ಗದ್ಗದವಾಗಿದ್ದಿತು. ಅವನ ಅಸಹನೆಯನ್ನು ನೋಡಿದವರಿಗೆ ಅಯ್ಯೋ ಪಾಪ ಎನಿಸುತ್ತಿದ್ದಿತು. ತಮ್ಮಂದಿರ ಬಳಿಗೆ ತನ್ನನ್ನು ಕರೆದೊಯ್ಯಿರಿ ಎಂಬುದನ್ನು ಬಿಟ್ಟರೆ ಇನ್ನೇನೂ ಮಾತೇ ಇಲ್ಲ. “ಎಷ್ಟೋ ರಾಜರುಗಳು ಯುದ್ಧದಲ್ಲಿ ನನಗಾಗಿ ಪ್ರಾಣತ್ಯಾಗ ಮಾಡಿರುವರು. ಅವರನ್ನೂ ನಾನು ನೋಡಬೇಕು. ಅವರು ಯಾರೂ ಇಲ್ಲಿ ಕಾಣಿಸುತ್ತಿಲ್ಲವಲ್ಲ? ರಾಧೇಯ ಇಲ್ಲಿರಬೇಕಾಗಿತ್ತು; ಅವನೂ ಕಾಣಿಸುತ್ತಿಲ್ಲ. ಅಭಿಮನ್ಯುವೂ ಕಾಣಿಸುತ್ತಿಲ್ಲ. ನನಗೆ ಈ ಸ್ವರ್ಗದ ನಿಯಮಗಳೇ ಅರ್ಥವಾಗುತ್ತಿಲ್ಲ. ನನ್ನನ್ನು ಇಲ್ಲಿಂದ ಹೊರಗೊಯ್ಯಿರಿ”ಎಂದನು.

ಈಗ ಇಂದ್ರನು, “ಅವರನ್ನು ನೀನು ನೋಡಲೇಬೇಕು ಎನ್ನುವುದಾದರೆ, ನಿನ್ನನ್ನು ನನ್ನ ಅನುಚರರು ಕರೆದೊಯ್ಯುತ್ತಾರೆ. ನೀನು ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ಹೋಗಿ ಬಾ” ಎಂದು ಅನುಚರನೊಬ್ಬನನ್ನು ಕಳುಹಿಸಿದನು. ಯುಧಿಷ್ಠಿರನು ಅವನನ್ನು ಅನುಸರಿಸಿ ನಡೆದನು. ಹಾದಿಯು ದೀರ್ಘವಾಗಿದ್ದಿತು. ಸ್ವರ್ಗದ ಬಳಿ ಇದ್ದ ಬೆಳಕೂ ಸೌಂದರ್ಯವೂ ಕ್ರಮೇಣ ಇಲ್ಲವಾದವು. ಕ್ರಮೇಣ ಮಬ್ಬುಗತ್ತಲೆ ಕವಿಯಿತು, ಕೊನೆಗೆ ಪೂರ್ತಿ ಕತ್ತಲಾಯಿತು. ವಾತಾವರಣವು ಕೆಟ್ಟ ವಿಷವಾಸನೆಗಳಿಂದ ತುಂಬಿಕೊಡಿತು. ಇನ್ನೊಂದು ಕುರುಕ್ಷೇತ್ರವೋ ಎನ್ನುವಂತೆ ಸಹಿಸಲಸಾಧ್ಯವಾಯಿತು. ಭೀಕರವಾಗಿ ಕಾಣುತ್ತಿದ್ದ ಕೊಳೆತ ಶವಗಳು, ಅನೇಕ ರೀತಿಯ ಕ್ರಿಮಿಕೀಟಗಳು ಎಲ್ಲೆಲ್ಲೂ ಗೋಚರಿಸುತ್ತಿದ್ದವು. ಯುಧಿಷ್ಠಿರನು“ಏನಯ್ಯಾ , ಈ ಸ್ಥಳ ಇಷ್ಟು ಭೀಕರವಾಗಿದೆ! ನನ್ನ ಸೋದರರು ಇರುವ ಸ್ಥಳವೆಲ್ಲಿದೆ? ಇನ್ನೂ ಎಷ್ಟು ದೂರ?” ಎಂದು ಕೇಳಿದ್ದಕ್ಕೆ ಅವನು ಉತ್ತರವನ್ನೆ ಕೊಡಲಿಲ್ಲ. “ಸ್ವರ್ಗದ ಈ ಭಾಗ ಯಾವ ದೇವತೆಗೆ ಸೇರಿದುದಪ್ಪ?”ಎಂದುದಕ್ಕೆ ಆ ಅನುಚರನು “ಸ್ವಾಮಿ, ಇದೇ ನಿಮ್ಮ ಸೋದರರು ಇರುವ ಸ್ಥಳಕ್ಕೆ ಕರೆದೊಯ್ಯುವ ದಾರಿ. ನಿಮಗೆ ಇದು ಸಹಿಸಲಾಗುವುದಿಲ್ಲವಾದರೆ ಹಿಂದಿರುಗಿ ಹೋಗೋಣ” ಎಂದನು. ಯುಧಿಷ್ಠಿರನಿಗೆ ಅಲ್ಲಿ ನಿಲ್ಲಲಾಗುತ್ತಿರಲಿಲ್ಲ; ಅಷ್ಟು ಕೆಟ್ಟ ವಾಸನೆ. ಕ್ಷಣಮಾತ್ರ ಅಲ್ಲಿ ನಿಂತ ಅವನು, ಇನ್ನು ಹಿಂದಿರುಗುವುದೆಂದು ನಿರ್ಧರಿಸಿದನು. ಆ ಕೂಡಲೆ ಎಲ್ಲೆಲ್ಲಿಂದಲೋ ಆರ್ತಧ್ವನಿಗಳು ಕೇಳತೊಡಗಿದವು. ಯುಧಿಷ್ಠಿರ, ಹಿಂದಿರುಗಬೇಡ. ದಯವಿಟ್ಟು ಅಲ್ಲಿಯೇ ನಿಲ್ಲು. ನೀನು ಬಂದದ್ದರಿಂದ ನಮ್ಮಗಳ ಯಾತನೆ ಅದೆಷ್ಟೋ ಕಡಿಮೆಯಾಗಿದೆ!ನೀನು ಮಹಾ ಸಾಧುಪುರುಷ. ನಿನ್ನ ಇರುವಿಕೆ ನಮ್ಮ ದುಃಖವನ್ನು ಸಹ್ಯವಾಗಿಸುತ್ತದೆ! ದಯವಿಟ್ಟು ಹೊರಟು ಹೋಗಬೇಡ” ಎಂದು ಮೊರೆಯಿಡಲಾರಂಭಿಸಿದವು. ಈ ಧ್ವನಿಗಳೆಲ್ಲ ಪರಿಚಿತವಾಗಿವೆಯಲ್ಲ! ಎಂದುಕೋಡ ಯುಧಿಷ್ಠಿರನು “ಯಾರಪ್ಪನೀವು, ನನ್ನ ಸಹಾಯವನ್ನು ಬಯಸುತ್ತಿರುವವರು?” ಎಂದು ಕೇಳಲು, ಧ್ವನಿಗಳು “ನಾನು ರಾಧೇಯ” “ನಾನು ಭೀಮ” ಇತ್ಯಾದಿಯಾಗಿ ಧೃಷ್ಟದ್ಯುಮ್ನ, ದ್ರೌಪದಿ ಮತ್ತು ಅವನ ಸೋದರರೆಲ್ಲರ ಧ್ವನಿಗಳೂ ಕೇಳಿಬಂದವು. ಯುಧಿಷ್ಠಿರನಿಗೆ ಅತ್ಯಂತ ಆಶ್ಚರ್ಯವಾಯಿತು. ಅವನ ಕೋಪವು ಮೇರೆಮೀರಿತು. “ಇವರೆಲ್ಲರೂ ಇಲ್ಲೇಕೆ ಇರುವರು? ಇವರಾರು ಪಾಪ ಮಾಡಿದವರಲ್ಲ. ನನಗೆ ಈ ಸ್ವರ್ಗದ ರೀತಿನೀತಿಗಳೇ ಅರ್ಥವಾಗುತ್ತಿಲ್ಲ. ಅಂಥ ಪರಮಪಾಪಿಯಾದ ದುರ್ಯೋಧನನು ಎರಡನೆಯ ಇಂದ್ರನಂತೆ ಅಲ್ಲಿ ವೈಭವದಿಂದ ಕುಳಿತಿದ್ದಾನೆ. ನನ್ನ ಪ್ರೀತಿಯ ಸೋದರರೂ, ದ್ರೌಪದಿ ಮುಂತಾದ ನಿಷ್ಪಾಪ ಜೀವಿಗಳೂ ಇಲ್ಲಿ ನರಕದಲ್ಲಿದ್ದಾರೆ. ನಾನು ಎಚ್ಚೆತ್ತಿರುವೆನೆ, ಅಥವಾ ಇದೊಂದು ಭಯಾನಕ ಸ್ವಪ್ನವೇ?” ಎಂದು ಕೂಗಿದನು. ಅನಂತರ ಇಂದ್ರನ ಅನುಚರನನ್ನು ಕುರಿತು “ನಾನು ನನ್ನ ಸೋದರರ ಧ್ವನಿಗಳನ್ನು ಕೇಳಿದೆನು. ಇನ್ನು ನೀನು ಹೋಗಬಹುದು”ಎಂದನು.

ಒಂದು ಗಂಟೆ ಕಾಲ ಹಾಗೆ ಕಳೆಯಿತು. ಅನಂತರ ಇಂದ್ರನೇ ಮೊದಲಾದ ಸ್ವರ್ಗದ ದೇವತೆಗಳೆಲ್ಲರೂ ಯುಧಿಷ್ಠಿರನಿದ್ದಲ್ಲಿಗೆ ಬಂದರು. ಅವರು ಬರುತ್ತಿದ್ದಂತೆಯೇ ವಾತಾವರಣವು ಇದ್ದಕ್ಕಿದ್ದಂತೆ ಬದಲಾಯಿತು. ಕತ್ತಲೆ ಕಳೆದು ಬೆಳಕಾಯಿತು. ಭೀಕರತೆ ಮಾಯವಾಯಿತು. ಗಾಳಿ ಸುಗಂಧ ಪೂರಿತವಾಯಿತು. ಯುಧಿಷ್ಠಿರನಿಗೆ ಇದೆಲ್ಲ ಏನೆಂದೇ ತಿಳಿಯದಾಯಿತು. ಇಂದ್ರನು ನಕ್ಕು “ನಾವೆಲ್ಲರೂ ನಿನ್ನ ನಡತೆಯಿಂದ ಪ್ರೀತರಾಗಿದ್ದೇವೆ, ಯುಧಿಷ್ಠಿರ. ನೀನಿಂದು ಸ್ವರ್ಗವನ್ನು ನಿಜವಾಗಿ ಸಂಪಾದಿಸಿಕೊಡಿರುವೆ. ನಿನ್ನ ಭ್ರಾ



ಪ್ರೇಮ ಅನುಪಮವಾದದ್ದು. ಪ್ರತಿಯೊಬ್ಬ ರಾಜನೂ ನರಕದ ಮೂಲಕ ಹಾದುಹೋಗಬೇಕೆಂಬುದು ಇಲ್ಲಿಯ ನಿಯಮ. ಅದಕ್ಕಾಗಿ ಮತ್ತು ದ್ರೋಣನ ಸಾವಿನ ಸಂದರ್ಭದಲ್ಲಿ ಹೇಳಿದ ಆ ಒಂದು ಸುಳ್ಳಿಗಾಗಿ ನೀನು ಇಲ್ಲಿಗೆ ಬರಬೇಕಾಯಿತು. ಈಗ ನೀನು ಸರ್ವಪಾಪಗಳಿಂದಲೂ ಮುಕ್ತನಾಗಿ ಪುನೀತನಾಗಿದ್ದೀಯೆ. ಸ್ವರ್ಗದ ನಿಯಮಗಳು ಅರ್ಥವಾಗುವುದಿಲ್ಲ ಎಂದೆ. ನಾನು ಹೇಳುತ್ತೇನೆ ಕೇಳು.

“ಯಾರ ಪಾಪವು ಪುಣ್ಯಕ್ಕಿಂತ ಹೆಚ್ಚಾಗಿರುವುದೋ ಅವನು ಮೊದಲು ತನ್ನ ಪುಣ್ಯಫಲವನ್ನು ಅನುಭವಿಸುವುದಕ್ಕಾಗಿ ಸ್ವರ್ಗಕ್ಕೆ ಬರುತ್ತಾನೆ. ಅದು ಮುಗಿದೊಡನೆ ನರಕಕ್ಕೆ ಹೋಗುತ್ತಾನೆ. ಆದರೆ ಯಾರ ಪುಣ್ಯವು ಪಾಪಕ್ಕಿಂತ ಬಹಳವಾಗಿರುವುದೋ ಅವನಿಗೆ ಮೊದಲು ನರಕದ ಅನುಭವವಾಗುತ್ತದೆ. ಪಾಪಫಲವನ್ನು ಹಾಗೆ ಕಳೆದುಕೊಂಡು ಅವನು ಸ್ವರ್ಗಕ್ಕೆ ಬರುತ್ತಾನೆ. ನಿನ್ನ ಪಾಪ ತುಂಬ ಅಲ್ಪವಾಗಿತ್ತು. ನಿಜವಾಗಿ ಹೇಳಬೇಕೆಂದರೆ ಆ ಒಂದು ಸುಳ್ಳು ಮಾತ್ರವೇ ನೀನು ಮಾಡಿದ ಪಾಪವೆನ್ನಬಹುದು. ನಿನ್ನ ಸೋದರರ ವಿಚಾರವಾಗಿ, ಅವರು ಮಾಡಿದ ಪಾಪಗಳೇನೆಂಬುದನ್ನು ಬರುತ್ತ ದಾರಿಯಲ್ಲಿ ನೀನೇ ಹೇಳಿರುವೆ. ಅದಕ್ಕಾಗಿಯೇ ಅವರು ಕೆಲವು ಗಂಟೆಗಳ ಕಾಲ ನರಕದಲ್ಲಿರಬೇಕಾಯಿತು. ಈಗ ಅವರೆಲ್ಲರೂ ಸ್ವರ್ಗದಲ್ಲಿ ಇರುವರು. ಇದೆಲ್ಲವೂ ನಿನ್ನ ಅನುಭವಕ್ಕಾಗಿ ಕಲ್ಪಿಸಿದ ಭ್ರಮೆಯಾಗಿತ್ತು. ಈಗ ನಿನ್ನ ಸೋದರರು ಇಲ್ಲಿಲ್ಲ. ನನ್ನ ಜೊತೆಗೆ ಬಾ, ಅವರನ್ನು ತೋರಿಸುತ್ತೇನೆ” ಎಂದನು.

ಅಲ್ಲಿಗೆ ಬಂದಿದ್ದ ಯಮಧರ್ಮರಾಜನು “ಇದೇ ನನ್ನ ಮೂರನೆಯ ಹಾಗೂ ಕೊನೆಯ ಪರೀಕ್ಷೆಯಾಗಿತ್ತು. ನೀನು ನನ್ನದೇ ಪ್ರತಿರೂಪವೆಂದು ತೋರಿಸಿಕೊಟ್ಟಿರುವೆ. ನಿನ್ನ ಈ ಎಲ್ಲ ಅನುಭವಗಳಿಗೆ ನಾನೇ ಕಾರಣನು. ಬಾ ಈಗ, ನಿನ್ನ ಸೋದರರನ್ನು ಸ್ವರ್ಗದಲ್ಲಿ ನೋಡುವೆಯಂತೆ” ಎಂದನು. ಅವರೆಲ್ಲರೂ ಯುಧಿಷ್ಠಿರನನ್ನು ಸ್ವರ್ಗದಲ್ಲಿ ಹರಿಯುತ್ತಿದ್ದ ಗಂಗಾನದಿಗೆ ಕರೆದೊಯ್ಧರು. ಅವನು ಅದರಲ್ಲಿ ಸ್ನಾನಮಾಡಿದನು. ಆಗ ಅವನಿಗೆ ತನ್ನ ಮನುಷ್ಯಸಹಜವಾದ ಭಾವನೆಗಳೆಲ್ಲವೂ ಬಿದ್ದುಹೋದವು. ಶರೀರ ದೇವಾಯತನವಾಯಿತು. ಸಂತೋಷಮನಸ್ಕನಾಗಿ ಅವನು ದೇವತೆಗಳೊಡನೆ ಸ್ವರ್ಗಕ್ಕೆ ಹೊರಟನು. ಅವರೆಲ್ಲರೂ ಇಂದ್ರಸಭೆಯನ್ನು ಪ್ರವೇಶಿಸಿದರು.

ಕೃಷ್ಣನು ಅಲ್ಲಿ ದೇವತೆಗಳೆಲ್ಲರ ಮಧ್ಯೆ ಕುಳಿತಿದ್ದನು. ಅವನ ಪಕ್ಕದಲ್ಲಿದ್ದ ಅರ್ಜುನನು ಅಣ್ಣನನ್ನು ನೋಡಿ ನಕ್ಕನು. ಇಬ್ಬರೂ ಮೇಲೆದ್ದು ಬಂದು ಯುಧಿಷ್ಠಿರನನ್ನು ಕೈಹಿಡಿದು ಕರೆದೊಯ್ದರು. ಅವರೊಂದಿಗೆ ದ್ವಾದಶಸೂರ್ಯರೊಂದಿಗೆ ಶೋಭಿಸುತ್ತಿದ್ದ ರಾಧೇಯನಿದ್ದನು. ಮರುತ್ತುಗಳೊಂದಿಗೆ ಕುಳಿತಿದ್ದ ಭೀಮನೂ ಕಾಣಿಸಿದನು. ಅಶ್ವಿನೀದೇವತೆಗಳೊಂದಿಗೆ ಕುಳಿತಿದ್ದ ನಕುಲಸಹದೇವರುಗಳು ಕಾಣಿಸಿದರು. ಅವರೆಲ್ಲರೂ ಬಂದು ಇವನನ್ನು ಸ್ವಾಗತಿಸಿದರು. ತನ್ನ ಮಕ್ಕಳೊಂದಿಗೆ ಜ್ವಾಲೆಯಂತೆ ಉರಿಯುತ್ತಿದ್ದ ದ್ರೌಪದಿಯ ಶೋಭೆ ಅದ್ವಿತೀಯವಾಗಿದ್ದಿತು. ಸಾತ್ಯಕಿ ಮತ್ತು ಇತರ ವೃಷ್ಣಿವೀರರೆಲ್ಲರೂ ಅಲ್ಲಿ ಕಾಣಿಸಿದರು. ತಂಪಾಗಿ ಹೊಳೆಯುತ್ತಿದ್ದ ಚಂದ್ರನೊಂದಿಗೆ ಅಭಿಮನ್ಯು ಕುಳಿತಿದ್ದನು. ಅಗ್ನಿಯ ಜೊತೆಯಲ್ಲಿ ಧೃಷ್ಟದ್ಯುಮ್ನನು ಕಾಣಿಸಿದನು. ವಸುಗಳ ಜೊತೆಗೆ ಭೀಷ್ಮನೂ, ಬು

ಹಸ್ಪತಿಯ ಜೊತೆಗೆ ದ್ರೋಣನೂ ಕಾಣಿಸಿದರು. ದುರ್ಯೋಧನನು ತನ್ನ ಪಾಪಗಳನ್ನೆಲ್ಲ ತೊಳೆದುಕೊಂಡು ಅಲ್ಲಿಗೆ ಬಂದಿದ್ದನು. ಯಮನ ಜೊತೆಯಲ್ಲಿ ವಿದುರನೂ ಇದ್ದನು. ಅವರೆಲ್ಲರೂ ಎದ್ದುಬಂದು ಹಾರ್ದಿಕವಾಗಿ ಯುಧಿಷ್ಠಿರನನ್ನು ಸ್ವಾಗತಿಸಿ ತಮ್ಮ ಜೊತೆಯಲ್ಲಿ ಕರೆದೊಯ್ದರು.

ಪರಿವಿಡಿ